ADVERTISEMENT

ಗೌರಿಬಿದನೂರು: ಚಿರತೆ ಮರಿ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2024, 15:27 IST
Last Updated 4 ಡಿಸೆಂಬರ್ 2024, 15:27 IST
ಗೌರಿಬಿದನೂರು ತಾಲ್ಲೂಕಿನ ಕಲ್ಲಿನಾಯಕನಹಳ್ಳಿಯ ಕ್ರಿಶ್ಚಿಯನ್ ಕಾಲೊನಿ ಬಳಿ ಬುಧವಾರ ಚಿರತೆ ಮರಿ ರಕ್ಷಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ
ಗೌರಿಬಿದನೂರು ತಾಲ್ಲೂಕಿನ ಕಲ್ಲಿನಾಯಕನಹಳ್ಳಿಯ ಕ್ರಿಶ್ಚಿಯನ್ ಕಾಲೊನಿ ಬಳಿ ಬುಧವಾರ ಚಿರತೆ ಮರಿ ರಕ್ಷಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ   

ಗೌರಿಬಿದನೂರು: ತಾಲ್ಲೂಕಿನ ಕಲ್ಲಿನಾಯಕನಹಳ್ಳಿ ಗ್ರಾಮದ ಕ್ರಿಶ್ಚಿಯನ್ ಕಾಲೊನಿ ಪಕ್ಕದ ರೈಲ್ವೆ ಹಳಿ ಬಳಿಯ ಪೊದೆಯಲ್ಲಿ, ಚಿರತೆ ಮರಿಯೊಂದು ಬುಧವಾರ ಬೆಳಗ್ಗೆ ಪ್ರತ್ಯಕ್ಷವಾಗಿತ್ತು.

ಚಿರತೆ ಮರಿಯನ್ನು ಕಂಡ ಕುರಿಗಾಹಿಗಳು ಅರಣ್ಯಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಅಧಿಕಾರಿಗಳು, ಎರಡು ತಿಂಗಳ ಇರುವ ಚಿರತೆ ಮರಿಯನ್ನು ರಕ್ಷಿಸಿ, ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

ಇದೇ ವೇಳೆ ವಲಯ ಅರಣ್ಯಧಿಕಾರಿ ಹಂಸವಿ, ಉಪ ವಲಯ ಅಧಿಕಾರಿಗಳಾದ ಯಲ್ಲಪ್ಪ, ಶಿವಕುಮಾರ್ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

ADVERTISEMENT
ಗೌರಿಬಿದನೂರು ತಾಲ್ಲೂಕಿನ ಕಲ್ಲಿನಾಯಕನಹಳ್ಳಿಯ ಕ್ರಿಶ್ಚಿಯನ್ ಕಾಲೊನಿ ಬಳಿ ಬುಧವಾರ ಚಿರತೆ ಮರಿ ರಕ್ಷಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.