ADVERTISEMENT

ಸರ್ಕಾರಿ ವಾಹನ ಪಂಕ್ಚರ್‌: ಬೇರೆ ಕಾರಿನಲ್ಲಿ ತೆರಳಿದ ಸುಧಾಕರ್‌

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2022, 2:29 IST
Last Updated 30 ಮಾರ್ಚ್ 2022, 2:29 IST
ಗೌರಿಬಿದನೂರಿನಲ್ಲಿ ಪಂಕ್ಚರ್ ಆಗಿದ್ದ ಸಚಿವರ ಕಾರನ್ನು ಸರಿಪಡಿಸುತ್ತಿರುವ ಬೆಂಬಲಿಗರು
ಗೌರಿಬಿದನೂರಿನಲ್ಲಿ ಪಂಕ್ಚರ್ ಆಗಿದ್ದ ಸಚಿವರ ಕಾರನ್ನು ಸರಿಪಡಿಸುತ್ತಿರುವ ಬೆಂಬಲಿಗರು   

ಗೌರಿಬಿದನೂರು: ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು ತೆರಳುತ್ತಿದ್ದ ಸರ್ಕಾರಿ ವಾಹನ ಮಂಗಳವಾರ ‌ಸಂಜೆ ನಗರದ ನ್ಯಾಷನಲ್ ಕಾಲೇಜಿನ ಬಳಿ ಪಂಕ್ಚರ್ ಆದ ಪರಿಣಾಮ ಸಚಿವರು ಮತ್ತೊಂದು ಕಾರಿನಲ್ಲಿ ತೆರಳಿದರು.

ನಗರ ಹೊರವಲಯದ ಚೆಲ್ಲಾ ಫಾರಂನಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಆಯೋಜಿಸಿದ್ದ ಸಭೆಗೆ ಆಗಮಿಸುತ್ತಿದ್ದ ವೇಳೆ ಈ‌ ಘಟನೆ ನಡೆದಿದೆ.

ಬಳಿಕ ಸಚಿವರು ಕಾರಿನಿಂದ ಕೆಳಗಿಳಿದು ಪರ್ಯಾಯವಾಗಿ ಮತ್ತೊಂದು ಕಾರಿನ ಮೂಲಕ ತೆರಳಿದರು. ಸಚಿವರ ಬೆಂಬಲಿಗರು ಹಾಗೂ ಕೆಲವು ಕಾರ್ಯಕರ್ತರು ‌ಸ್ಥಳದಲ್ಲೇ ಇದ್ದು ನಸು ಕತ್ತಲಿನಲ್ಲಿ ಕಾರಿನ ಚಕ್ರಕ್ಕೆ ಪಂಕ್ಚರ್ ಹಾಕಿಸುವ ಕಾರ್ಯಕ್ಕೆ ಮುಂದಾಗಿದ್ದರು.

ADVERTISEMENT

ಮಾರ್ಚ್‌ 1ರಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಚಿಕ್ಕಬಳ್ಳಾಪುರ ‌ಜಿಲ್ಲೆಯ ಮುದ್ದೇನಹಳ್ಳಿಗೆ ಆಗಮಿಸುತ್ತಿದ್ದಾರೆ. ಹೀಗಾಗಿ, ಸ್ಥಳೀಯ ‌ಕಾರ್ಯಕರ್ತರೊಂದಿಗೆ ಪೂರ್ವಭಾವಿಯಾಗಿ ಸಭೆ ನಡೆಸುವ ಸಲುವಾಗಿ ಸಚಿವರು ನಗರಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.