ADVERTISEMENT

ಗೌರಿಬಿದನೂರು: ವಾಟದಹೊಸಹಳ್ಳಿ ರೈತರ ತಮಟೆ ಚಳವಳಿ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2025, 6:18 IST
Last Updated 18 ಆಗಸ್ಟ್ 2025, 6:18 IST
ಗೌರಿಬಿದನೂರು ನಗರಕ್ಕೆ ವಾಟದಹೊಸಹಳ್ಳಿ ಕೆರೆ ನೀರನ್ನು ಹರಿಸುವುದನ್ನು ವಿರೋಧಿಸಿ ರೈತರು ಶನಿವಾರ ತಮಟೆ ಚಳವಳಿ ನಡೆಸಿದರು
ಗೌರಿಬಿದನೂರು ನಗರಕ್ಕೆ ವಾಟದಹೊಸಹಳ್ಳಿ ಕೆರೆ ನೀರನ್ನು ಹರಿಸುವುದನ್ನು ವಿರೋಧಿಸಿ ರೈತರು ಶನಿವಾರ ತಮಟೆ ಚಳವಳಿ ನಡೆಸಿದರು   

ಗೌರಿಬಿದನೂರು: ವಾಟದಹೊಸಹಳ್ಳಿ ಕೆರೆ ನೀರನ್ನು ನಗರಕ್ಕೆ ತರುವುದನ್ನು ವಿರೋಧಿಸಿ ತಾಲ್ಲೂಕು ಕಚೇರಿ ಮುಂದೆ ನಡೆಯುತ್ತಿರುವ ರೈತರ ಪ್ರತಿಭಟನೆ 11ನೇ ದಿನ ತಮಟೆ ಚಳವಳಿ ಹಮ್ಮಿಕೊಂಡಿದ್ದರು.

ವಾಟದಹೊಸಹಳ್ಳಿ ಅಚ್ಚುಕಟ್ಟುದಾರರ ಸಂಘದ ಅಧ್ಯಕ್ಷ ಮಾಳಪ್ಪ ಮಾತನಾಡಿ, ನಮ್ಮ ಹೋರಾಟಗಳಿಗೆ ಅಧಿಕಾರಿಗಳಾಗಲಿ, ಪ್ರತಿನಿಧಿಗಳಾಗಲಿ ಸ್ಪಂದಿಸುತ್ತಿಲ್ಲ. ರೈತರು ದೇಶಕ್ಕೆ ಬೆನ್ನೆಲುಬು ಎಂದು ರೈತರ ಬೆನ್ನೆಲುಬನ್ನು ಮುರಿಯುತ್ತಿದ್ದಾರೆ. ₹65 ಕೋಟಿ ತೆರಿಗೆ ಹಣ ಪೋಲಾಗುತ್ತದೆ. ನಮ್ಮ ಬೇಡಿಕೆ ಈಡೇರಿಸದೆ ಇದ್ದರೆ ಮುಂದಿನ ದಿನಗಳಲ್ಲಿ ಸಾವಿರಾರು ಮಂದಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಮಧು ಸೂರ್ಯನಾರಾಯಣರೆಡ್ಡಿ, ಹರ್ಷವರ್ಧನ್ ರೆಡ್ಡಿ, ರವಿಚಂದ್ರರೆಡ್ಡಿ, ಕೋಡಿರ್ಲಪ್ಪ ಸೇರಿದಂತೆ ಹಲವು ರೈತರು ಪಾಲ್ಗೊಂಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.