
ಉಚಿತ ಹೆಲ್ಮೆಟ್ ವಿತರಣಾ ಕಾರ್ಯಕ್ರಮಕ್ಕೆ ಸಂಸದ ಡಾ.ಕೆ ಸುಧಾಕರ್ ಚಾಲನೆ ನೀಡಿದರು
ಗುಡಿಬಂಡೆ: ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕೊಡುವುದು ಜವಾಬ್ದಾರಿಯುತ ಸಮಾಜಮುಖಿ ಸೇವೆ ಎಂದು ಸಂಸದ ಡಾ.ಕೆ ಸುಧಾಕರ್ ಹೇಳಿದರು.
ತಟ್ಟಹಳ್ಳಿ ಕ್ರಾಸ್ ಬಳಿ ಹರಿನಾಥ್ ರೆಡ್ಡಿ ಚಾರಿಟೇಬಲ್ ಟ್ರಸ್ಟ್ ಭಾನುವಾರ ಆಯೋಜಿಸಿದ್ದ ಉಚಿತ ಹೆಲ್ಮೆಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತಾಗಬೇಕು. ಜೊತೆಗೆ ಹೆಲ್ಮೆಟ್ ಜಾಗೃತಿ ಪಡೆದುಕೊಳ್ಳುವಂತೆ ಆಗಬೇಕು ಎಂದರು.
ಹರಿನಾಥ್ ರೆಡ್ಡಿ ಮಾತನಾಡಿ, ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಎಚ್.ಎನ್ ವ್ಯಾಲಿ ಯೋಜನೆಯನ್ನು ಜಿಲ್ಲೆಗೆ ಹಾಗೂ ಬಾಗೇಪಲ್ಲಿ ಕ್ಷೇತ್ರಕ್ಕೇ ತಂದಿದ್ದು ಡಾ .ಕೆ ಸುಧಾಕರ್ ಅವರು. ಇಲ್ಲಿನ ಶಾಸಕರು ಮಂತ್ರಿಗಳನ್ನು ಕರೆಸಿ ಟೇಪ್ ಕಟ್ ಮಾಡುತ್ತಾರೆ. ಕ್ಷೇತ್ರದಲ್ಲಿ ಶಾಸಕರ ವಿರುದ್ಧ ಮಾತನಾಡಿದರೆ ಅವರನ್ನು ರೌಡಿ ಶೀಟರ್‌ಗಳನ್ನಾಗಿ ಮಾಡುತ್ತಾರೆ. ಇದು ಅವರ ಸಾಧನೆ ಎಂದರು.
ರಾಮಲಿಂಗಪ್ಪ, ಕೋನಪ್ಪರೆಡ್ಡಿ, ಶ್ರೀವಾಸ್ ರೆಡ್ಡಿ, ಮಂಜುನಾಥ್ ರೆಡ್ಡಿ, ಪಾವಜೇನಹಳ್ಳಿ ನಾಗರಾಜ್ ರೆಡ್ಡಿ, ಎಚ್.ಎನ್ ಮಂಜುನಾಥ್ ರೆಡ್ಡಿ, ಕೃಷ್ಣರೆಡ್ಡಿ, ಪದ್ಮಾವತಿ, ಭಾಸ್ಕರ್ ರೆಡ್ಡಿ, ಚಂದ್ರಶೇಖರ್ ರೆಡ್ಡಿ, ಹನುಮಂತರೆಡ್ಡಿ, ಕೃಷ್ಣಾರೆಡ್ಡಿ, ಮಲ್ಲಿಕಾರ್ಜುನ್, ಗೋಪಾಲ್ ಕೃಷ್ಣ, ಪೈಯೂರು ವೇಣು, ಅಶ್ವತ್ಥಪ್ಪ, ಗಂಗಿರೆಡ್ಡಿ, ಬೈರಪ್ಪ, ಸುರೇಂದ್ರರೆಡ್ಡಿ, ಬಶೀರ್, ಬಾಬು, ವೆಂಕಟಾಚಲಪತಿ, ಅನಾ ಮೂರ್ತಿ, ತಟ್ಟಹಳ್ಳಿ ಮದ್ದರೆಡ್ಡಿ, ರಾಮಾಂಜಿ, ಅಪ್ಸರ್, ಲೋಕೇಶ್ ಗೌಡ ಹಾಜರಿದ್ದರು.