ADVERTISEMENT

ಭಗವದ್ಗೀತೆ ಮನುಕುಲದ ಮಾರ್ಗದರ್ಶಿ: ಸುಬ್ಬರಾಯಪ್ಪ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2024, 16:01 IST
Last Updated 26 ಆಗಸ್ಟ್ 2024, 16:01 IST
ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಆಚರಿಸಲಾಯಿತು
ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಆಚರಿಸಲಾಯಿತು   

ಗುಡಿಬಂಡೆ: ನಮ್ಮಲ್ಲಿ ದೇಶ ಪ್ರೇಮ, ಮಾನವೀಯತೆ ಸೇರಿದಂತೆ ಎಲ್ಲಾ ಗುಣ ಅಳವಡಿಸಿಕೊಂಡು ಮನುಷ್ಯತ್ವ ಪರಿಪಕ್ವವಾಗಲು ಪುಣ್ಯ ಪುರುಷರ ಜಯಂತಿ ಆಚರಣೆ ಅವಶ್ಯಕ ಎಂದು ಕಸಪಾ ಅಧ್ಯಕ್ಷ ಸುಬ್ಬರಾಯಪ್ಪ ತಿಳಿಸಿದರು.

ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ಆಯೋಜಿಸಿದ್ದ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಭಗವದ್ಗೀತೆ ಒಂದು ಧರ್ಮ ಜಾತಿಗೆ ಸೀಮಿತವಾಗದೆ ಇಡೀ ಮನುಕುಲದ ಮಾರ್ಗದರ್ಶಿಯಾಗಿದೆ. ಮಾನವಕುಲದ ಸಮಾನತೆ ಮತ್ತು ಶ್ರೇಯಸ್ಸಿಗಾಗಿ ಕೃಷ್ಣ ಭಗವದ್ಗೀತೆಯಲ್ಲಿ ಬೋಧಿಸಿರುವ ಆದರ್ಶಗಳು ಪೂರಕವಾಗಿವೆ ಎಂದು ತಿಳಿಸಿದರು.

ADVERTISEMENT

ತಹಶೀಲ್ದಾರ್ ಸಿಗ್ಬತ್ ವುಲ್ಲಾ ಮಾತನಾಡಿ, ಸುಖ ಸಂತೋಷ ಇಲ್ಲದ ಮೇಲೆ ಜೀವನಕ್ಕೆ ಅರ್ಥ ಇರುವುದಿಲ್ಲ, ನಿಜವಾದ ಸಂತೋಷ ಕಾಣಬೇಕಾದರೆ ಭಗವಂತನನ್ನು ಅರಿಯಬೇಕು. ಅವನಲ್ಲಿ ಶರಣಾಗಬೇಕು ಶ್ರೀಕೃಷ್ಣನ ಸಂದೇಶ ಪಾಲನೆ ಮಾಡಬೇಕು ಎಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆಯ ಲಕ್ಷ್ಮೀಪತಿ ರೆಡ್ಡಿ, ಪಯಾಜ್ ಅಹಮದ್, ಶ್ರೀನಿವಾಸ್ ಯಾದವ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.