ADVERTISEMENT

ಚಿಂತಾಮಣಿ | ಚಿನ್ನದ ನಿಕ್ಷೇಪ ಶೋಧಕ್ಕೆ ಹೆಲಿಕಾಪ್ಟರ್

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 21:20 IST
Last Updated 18 ಫೆಬ್ರುವರಿ 2026, 21:20 IST
ಕಡಿಮೆ ಎತ್ತರದಲ್ಲಿ ಹಾರಾಡುತ್ತಿರುವ ಹೆಲಿಕಾಪ್ಟರ್‌
ಕಡಿಮೆ ಎತ್ತರದಲ್ಲಿ ಹಾರಾಡುತ್ತಿರುವ ಹೆಲಿಕಾಪ್ಟರ್‌   

ಚಿಂತಾಮಣಿ: ತಾಲ್ಲೂಕಿನ ಕೈವಾರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಕಡಿಮೆ ಅಂತರದಲ್ಲಿ ರೆಡಾರ್ ಕಟ್ಟಿಕೊಂಡು ಕೆಂಪು ಬಣ್ಣದ ಹೆಲಿಕಾಪ್ಟರ್ ಚಿನ್ನದ ನಿಕ್ಷೇಪದ ಶೋಧನೆ ನಡೆಸುತ್ತಿದೆ. 

ಮನೆಗಳ ಮೇಲೆಯೇ ಹಾರಾಟ ನಡೆಸುತ್ತಿರುವ ಹೆಲಿಕಾಪ್ಟರನ್ನು ಜನರು ಆಶ್ಚರ್ಯದಿಂದ ನೋಡಿದರು. 

ಕೆಲವು ದಿನಗಳ ಹಿಂದೆ ಗುಡಿಬಂಡೆ ಹಾಗೂ ಬಾಗೇಪಲ್ಲಿ ತಾಲ್ಲೂಕಿನ ವಿವಿಧೆಡೆ ಚಿನ್ನದ ನಿಕ್ಷೇಪ ಸಿಗಲಿದೆ ಎಂಬ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ಹಾರಾಟ ನಡೆಸಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.