ADVERTISEMENT

ಚಿಕ್ಕಬಳ್ಳಾಪುರ | ‘10 ಚೆಕ್‌ಪೋಸ್ಟ್ ತೆರೆಯಲು ಸಹಕರಿಸಿ’

ಅಂತರ ರಾಜ್ಯ ಜಿಲ್ಲೆಗಳ ಅಧಿಕಾರಿಗಳೊಂದಿಗೆ ಚುನಾವಣಾಪೂರ್ವ ಸಭೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 6:06 IST
Last Updated 19 ಮಾರ್ಚ್ 2023, 6:06 IST
ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಚಿಲಮತ್ತೂರಿನಲ್ಲಿ ನಡೆದ ಅಂತರ ರಾಜ್ಯ ಗಡಿ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡಿದ್ದ ಚಿಕ್ಕಬಳ್ಳಾಪುರ, ಸತ್ಯಸಾಯಿ, ಅನ್ನಮಯ್ಯ ಜಿಲ್ಲೆಯ ಅಧಿಕಾರಿಗಳು
ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಚಿಲಮತ್ತೂರಿನಲ್ಲಿ ನಡೆದ ಅಂತರ ರಾಜ್ಯ ಗಡಿ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡಿದ್ದ ಚಿಕ್ಕಬಳ್ಳಾಪುರ, ಸತ್ಯಸಾಯಿ, ಅನ್ನಮಯ್ಯ ಜಿಲ್ಲೆಯ ಅಧಿಕಾರಿಗಳು   

ಚಿಕ್ಕಬಳ್ಳಾಪುರ: ಜಿಲ್ಲೆಗೆ ಹೊಂದಿಕೊಂಡಿರುವ ಅಂತರ ರಾಜ್ಯ ಗಡಿ ಜಿಲ್ಲೆಗಳಲ್ಲಿ ಅಕ್ರಮವಾಗಿ ಹಣ ವರ್ಗಾವಣೆ, ಮದ್ಯ ಖರೀದಿ ಇನ್ನಿತರ ವಸ್ತುಗಳ ವಿವರಗಳ ಬಗ್ಗೆ ಸುಳಿವು ಸಿಕ್ಕ ಕೂಡಲೇ ಚಿಕ್ಕಬಳ್ಳಾಪುರ ಜಿಲ್ಲಾಡಳಿತಕ್ಕೆ ಮಾಹಿತಿ ನೀಡುವಂತೆ ಹಾಗೂ ಸೂಕ್ತ ಕಾನೂನು ಕ್ರಮಕ್ಕೆ ಒಳಪಡಿಸಲು ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿ ಎನ್. ಎಂ ನಾಗರಾಜ್ ಮನವಿ ಮಾಡಿದರು.

ಚುನಾವಣೆ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಚಿಲಮತ್ತೂರಿನಲ್ಲಿ ನಡೆದ ಅಂತರ ರಾಜ್ಯ ಗಡಿ ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿಗಳೊಂದಿಗೆ ‘ಚುನಾವಣಾ ಪೂರ್ವ ಸಭೆ’ಯಲ್ಲಿ ಮಾತನಾಡಿದರು.

ತಮ್ಮ ಜಿಲ್ಲೆಗಳಿಂದ ಚಿಕ್ಕಬಳ್ಳಾಪುರ ಜಿಲ್ಲೆಗೆ ಅಕ್ರಮ, ಮದ್ಯ, ಇತರ ಉಡುಗೊರೆ ನೀಡುವಂತಹ , ಆಮಿಷವೊಡ್ಡುವಂತಹ ವಸ್ತುಗಳನ್ನು ನಮ್ಮ ಜಿಲ್ಲೆಗೆ ಸಾಗಿಸುವ, ದಾಸ್ತಾನು ಮಾಡುವಂತಹ ಸಾಧ್ಯತೆಗಳಿವೆ. ಅಂತಹ ಅಕ್ರಮ ಚಟುವಟಿಕೆಗಳನ್ನು ಸಂಪೂರ್ಣವಾಗಿ ತಡೆಯುವ ಸಂಬಂಧ ಅಗತ್ಯ ಸಲಹೆ, ಸೂಚನೆಗಳನ್ನು ನೀಡಿ ಎಂದು ಅಂತರರಾಜ್ಯ ಗಡಿ ಜಿಲ್ಲೆಗಳಾದ ಸತ್ಯಸಾಯಿ ಮತ್ತು ಅನ್ನಮಯ್ಯ ಜಿಲ್ಲೆಗಳ ಜಿಲ್ಲಾಧಿಕಾರಿಳನ್ನು ‌ಕೋರಿದರು.

ADVERTISEMENT

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್ ಮಾತನಾಡಿ ತಮ್ಮ ಜಿಲ್ಲೆಗಳಲ್ಲಿ ಅಕ್ರಮ ಕೃತ್ಯಗಳಲ್ಲಿ ಭಾಗಿಯಾಗಿರುವವರ, ಸೂಕ್ಷ್ಮ ಪ್ರದೇಶಗಳ ಹಾಗೂ ರೌಡಿಶೀಟರ್ ಗಳ ಪಟ್ಟಿಯನ್ನು ಒದಗಿಸುವಂತೆ ಮನವಿ ಮಾಡಿದರು.

ಜೊತೆಗೆ ತಮ್ಮ ಜಿಲ್ಲೆಗಳಲ್ಲಿ 10 ಕಡೆ ಚೆಕ್‌ಪೋಸ್ಟ್‌ ತೆರೆಯಲು ಅಗತ್ಯ ಸಹಕಾರ ನೀಡುವಂತೆ ಹಾಗೂ ಚುನಾವಣಾ ಅಕ್ರಮಗಳನ್ನು ತಡೆಯಲು ಜಂಟಿ ಕಾರ್ಯಚರಣೆ, ದಾಳಿಗಳನ್ನು ನಡೆಸಲು ಅಂತರ್ ರಾಜ್ಯ ಗಡಿ ಜಿಲ್ಲೆಗಳ ಅಧಿಕಾರಿಗಳಲ್ಲಿ ಮನವಿ ಮಾಡಿದರು. ಅಂತರ ರಾಜ್ಯ ಗಡಿ ಜಿಲ್ಲೆಗಳ ಅಧಿಕಾರಿಗಳು ಸ್ಪಂದಿಸಿ ಅಗತ್ಯ ಮಾಹಿತಿಯನ್ನು ಹಾಗೂ ದೂರವಾಣಿಗಳ ವಿವರಗಳನ್ನು ನೀಡಿ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು ನೀಡಿದರು.

ಸಭೆಯಲ್ಲಿ ಸತ್ಯಸಾಯಿ ಜಿಲ್ಲೆಯ ಜಿಲ್ಲಾಧಿಕಾರಿ ಪಿ.ಬಸಂತ್ ಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ದೇವ ಸಿಂಗ್, ಹೆಚ್ಚುವರಿ ಜಿಲ್ಲಾಧಿಕಾರಿ ಚೇತನ್, ಅನ್ನಮಯ್ಯ ಜಿಲ್ಲೆಯ ಜಿಲ್ಲಾಧಿಕಾರಿ ಪಿ.ಎಸ್ ಗಿರೀಶ್, ಪೊಲೀಸ್ ವರಿಷ್ಠಾಧಿಕಾರಿ ವಿ ಹರ್ಷವರ್ಧನ್ ರಾಜು, ಪೆನುಗೊಂಡ ಉಪವಿಭಾಧಿಕಾರಿ ಕೆ. ಕಾರ್ತಿಕ್, ಚಿಕ್ಕಬಳ್ಳಾಪುರ ಉಪ ವಿಭಾಗಾಧಿಕಾರಿ ಸಂತೋಷ್ ಕುಮಾರ್, ಡಿವೈಎಸ್‌ಪಿ ವರಿಷ್ಠಾಧಿಕಾರಿ ವಾಸುದೇವ್, ಕುಶಾಲ್ ಚೌಕ್ಸೆ ಹಾಗೂ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.