ADVERTISEMENT

ಮೀಸಲಾತಿ ಪಡೆಯದಿದ್ದರೆ ಬಲಿಜಿಗರಿಗೆ ಅನ್ಯಾಯ: ಎಸ್.ಪಿ. ಶ್ರೀನಿವಾಸ್

​ಪ್ರಜಾವಾಣಿ ವಾರ್ತೆ
Published 26 ಜನವರಿ 2023, 4:44 IST
Last Updated 26 ಜನವರಿ 2023, 4:44 IST
ಶ್ರೀನಿವಾಸ್
ಶ್ರೀನಿವಾಸ್   

ಚಿಕ್ಕಬಳ್ಳಾಪುರ: ‘ಪೂರ್ಣ ಪ್ರಮಾಣದಲ್ಲಿ ‘2ಎ’ ಮೀಸಲಾತಿ ಹೊಂದಿದ್ದ ಬಲಿಜ ಸಮುದಾಯವನ್ನು 1994ರಲ್ಲಿ ಹೊರ ತೆಗೆದರು. ಈಗ ನಾವು ಪೂರ್ಣ ಪ್ರಮಾಣದಲ್ಲಿ ‘2ಎ’ ಮೀಸಲಾತಿ ಪಡೆಯದಿದ್ದರೆ ಭವಿಷ್ಯದಲ್ಲಿ ಸಮುದಾಯಕ್ಕೆ ಅನ್ಯಾಯವಾಗಲಿದೆ ಎಂದು ಬಲಿಜ ಸಮುದಾಯದ ಮುಖಂಡ ಎಸ್.ಪಿ. ಶ್ರೀನಿವಾಸ್ ತಿಳಿಸಿದ್ದಾರೆ.

ಮೀಸಲಾತಿಗೆ ಆಗ್ರಹಿಸಿ ಜ.27ರಂದು ಬೆಂಗಳೂರಿನ ಸ್ವತಂತ್ರ್ಯ ಉದ್ಯಾನದಲ್ಲಿ ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಎಂ.ಆರ್.ಜಯರಾಮ್ ಹಾಗೂ ಎಂ.ಆರ್. ಸೀತಾರಾಮ್ ಅವರ ನೇತೃತ್ವದಲ್ಲಿ ‘ಬಲಿಜ ಸಂಕಲ್ಪ ಸಭೆ’ ನಡೆಯಲಿದೆ. ಸಭೆಯಲ್ಲಿ ಪಾಲ್ಗೊಳ್ಳುವ ಮೂಲಕ ಹೋರಾಟಕ್ಕೆ ಜಿಲ್ಲೆಯ ಸಮುದಾಯದ ಜನರು ಧ್ವನಿಗೂಡಿಸಬೇಕು ಎಂದು ಕೋರಿದ್ದಾರೆ.

ಈಗ ನಾವು ಮೀಸಲಾತಿ ಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಜನಾಂಗಕ್ಕೆ ಭಾರಿ ಅನ್ಯಾಯ ಆಗುತ್ತದೆ. ರಾಜಕೀಯ ಮತ್ತು ಉದ್ಯೋಗಕ್ಕಾಗಿ ಮೀಸಲಾತಿ ಪಡೆಯಲು ನಾವು ಯಾವುದೇ ರೀತಿಯ ಉಗ್ರ ಹೋರಾಟಕ್ಕೆ ಮುಂದಾಗಬೇಕು. ಇಲ್ಲವಾದರೆ ನಮ್ಮ ಮುಂದಿನ ಪೀಳಿಗೆಯ ಮಕ್ಕಳಿಗೆ ಅನ್ಯಾಯವಾಗಲಿದೆ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.