ADVERTISEMENT

ಗೌರಿಬಿದನೂರು: ಅಲೀಪುರದಲ್ಲಿ 2,500 ಕೆ.ಜಿ ದನದ ಮಾಂಸ ವಶ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 22:37 IST
Last Updated 3 ಆಗಸ್ಟ್ 2025, 22:37 IST
   

ಗೌರಿಬಿದನೂರು: ಬೆಂಗಳೂರಿನಲ್ಲಿ ಮಾರಾಟ ಮಾಡಲು ತಾಲ್ಲೂಕಿನ ಅಲೀಪುರದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 2,500 ಕೆ.ಜಿ ದನದ ಮಾಂಸವನ್ನು ಮಂಚೇನಹಳ್ಳಿ ಪೊಲೀಸರು ಭಾನುವಾರ ವಶಕ್ಕೆ ಪಡೆದಿದ್ದಾರೆ. ಇದರ ಒಟ್ಟು ಮೌಲ್ಯ ₹4.80 ಲಕ್ಷ ಎಂದು ಅಂದಾಜಿಸಲಾಗಿದೆ.

ಖಚಿತ ಮಾಹಿತಿ ಮೇರೆಗೆ ಪೊಲೀಸರು ಭಾನುವಾರ ಬೆಳಗಿನ ಜಾವ ದಾಳಿ ಅಲೀಪುರದ ಬಾಕ್ರಿ ಮೊಹಲ್ಲಾ ಗಲ್ಲಿಯ ಎರಡು ಶೆಡ್‌ಗಳ ಮೇಲೆ  ದಾಳಿ ನಡೆಸಿದರು.  

ಪೊಲೀಸರನ್ನು ಕಂಡ ತಕ್ಷಣವೇ ಶೆಡ್‌ ಮಾಲೀಕರು ಮತ್ತು ಕೆಲಸಗಾರರು ಪರಾರಿ ಆದರು. ಅಲ್ಲಿದ್ದ 25 ದನಗಳ ಮಾಂಸವನ್ನು ಪೊಲೀಸರು ವಶಪಡಿಸಿಕೊಂಡರು.  

ADVERTISEMENT

ಶೆಡ್‌ ಮಾಲೀಕರಾದ ಅಬ್ಬಾಸ್, ಖಾಲು, ಸೈಯದ್ ಸಕ್ಲೈನ್ ಮತ್ತು ಲಾಲು ವಿರುದ್ಧ ಮಂಚೇನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.