ADVERTISEMENT

ಆಧುನಿಕ ಬೇಸಾಯ ಪದ್ಧತಿ ಅಳವಡಿಸಿ: ಸಚಿವ ಡಾ‌.ಕೆ.ಸುಧಾಕರ್

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2021, 4:38 IST
Last Updated 9 ನವೆಂಬರ್ 2021, 4:38 IST
ಗೌಡಗೆರೆ ಗ್ರಾಮದಲ್ಲಿ ಆಯೋಜಿಸಿದ್ದ ಕೃಷಿ ವಸ್ತುಪ್ರದರ್ಶನವನ್ನು ಡಾ.ಕೆ.ಸುಧಾಕರ್ ಉದ್ಘಾಟಿಸಿದರು. ಮುಖಂಡ ಜಿ.ಆರ್.ರಾಜಶೇಖರ್, ಸುಬ್ಬಾರೆಡ್ಡಿ, ಹನುಮೇಗೌಡ ಇದ್ದರು
ಗೌಡಗೆರೆ ಗ್ರಾಮದಲ್ಲಿ ಆಯೋಜಿಸಿದ್ದ ಕೃಷಿ ವಸ್ತುಪ್ರದರ್ಶನವನ್ನು ಡಾ.ಕೆ.ಸುಧಾಕರ್ ಉದ್ಘಾಟಿಸಿದರು. ಮುಖಂಡ ಜಿ.ಆರ್.ರಾಜಶೇಖರ್, ಸುಬ್ಬಾರೆಡ್ಡಿ, ಹನುಮೇಗೌಡ ಇದ್ದರು   

ಗೌರಿಬಿದನೂರು: ತಾಲ್ಲೂಕು ‌ಮಂಚೇನಹಳ್ಳಿ‌ ಹೋಬಳಿ ಗೌಡಗೆರೆ ಗ್ರಾಮದಲ್ಲಿ ಬೆಂಗಳೂರು ‌ಕೃಷಿ‌ ವಿಶ್ವ ವಿದ್ಯಾಲಯ, ಕೃಷಿ ಇಲಾಖೆ ಹಾಗೂ ಸ್ಥಳೀಯ ಗ್ರಾ.ಪಂ ಸಹಯೋಗದೊಂದಿಗೆ ಈಚೆಗೆ ಆಯೋಜಿಸಿದ್ದ ಕೃಷಿ ಸಿಂಚನ, ಕೃಷಿ ವಸ್ತುಪ್ರದರ್ಶನ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಸಚಿವ ಡಾ‌.ಕೆ.ಸುಧಾಕರ್ ಉದ್ಘಾಟಿಸಿದರು.

ಗ್ರಾಮದ ಸಮುದಾಯ‌ಭವನದ ಮುಂಭಾಗ ಕೃಷಿ, ತೋಟಗಾರಿಕೆ, ಕೋಚಿಮುಲ್, ಅರಣ್ಯ, ಆರೋಗ್ಯ, ರೇಷ್ಮೆ ಇಲಾಖೆಯಿಂದ ಆಯೋಜಿಸಿದ್ದ ವಿವಿಧ ಮಳಿಗೆಗಳನ್ನು‌ ಉದ್ಘಾಟಿಸಿ, ಕೃಷಿ‌ ಸಿಂಚನ ವಿಚಾರಗೋಷ್ಠಿಯಲ್ಲಿ‌ ಭಾಗವಹಿಸಿದರು.

ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ರೈತರು ತಮ್ಮ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡುವ ಮೂಲಕ ಉತ್ತಮ ಇಳುವರಿ ಪಡೆಯಬೇಕು. ಕಾಲಕಾಲಕ್ಕೆ ಕೃಷಿ ಇಲಾಖೆಯ ಮಾರ್ಗದರ್ಶನ ಪಡೆದು ಉತ್ತಮ ಗುಣಮಟ್ಟದ ‌ಬಿತ್ತನೆ ಬೀಜವನ್ನು ಬಳಕೆ ಮಾಡಬೇಕು ಎಂದು‌ ಹೇಳಿದರು.

ADVERTISEMENT

ಬಿಜೆಪಿ ಕೃಷಿ ಮೋರ್ಚಾ ಜಿಲ್ಲಾಧ್ಯಕ್ಷ ಜಿ.ಆರ್.ರಾಜಶೇಖರ್ ಮಾತನಾಡಿ, 3 ತಿಂಗಳಿನಿಂದ ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದ ಬಿಎಸ್ಸಿ ಅಂತಿಮ‌ ವರ್ಷದ ವಿದ್ಯಾರ್ಥಿಗಳು ಗ್ರಾಮದಲ್ಲಿ ರೈತರಿಗೆ ‌ಕೃಷಿಯ‌ ಬಗ್ಗೆ ಅರಿವು‌ ಮೂಡಿಸಿದ್ದಾರೆ. ಕೃಷಿಯಲ್ಲಿ ಉತ್ತಮ ಇಳುವರಿ ಪಡೆಯುವ ಮಾರ್ಗೋಪಾಯಗಳು ಹೊಸ ತಳಿಗಳ ಪರಿಚಯ, ಹೈನೋದ್ಯಮ ಬಲಪಡಿಸುವ ಬಗ್ಗೆ ತಿಳಿಸಿದ್ದಾರೆ ಎಂದು ಹೇಳಿದರು.

ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ರಾಜೇಂದ್ರ ಪ್ರಸಾದ್, ಮುಖಂಡ ಸುಬ್ಬಾರೆಡ್ಡಿ, ನಾರಾಯಣಸ್ವಾಮಿ, ಎ.ಬಾಲಕೃಷ್ಣ, ಶ್ರೀಧರ್, ಸುದರ್ಶನರೆಡ್ಡಿ, ಜೆ.ವಿ.ಹನುಮೇಗೌಡ ಇದ್ದರು. ನೀರಿನ ಘಟಕ ಉದ್ಘಾಟನೆ: ಸಚಿವ ಡಾ.ಕೆ.ಸುಧಾಕರ್ ಅವರು ಸಾಯಿಕೃಷ್ಣ ಚಾರಿಟಬಲ್ ಟ್ರಸ್ಟ್ ‌ವತಿಯಿಂದ ಗೌಡಗೆರೆ ಗ್ರಾಮದಲ್ಲಿ ‌ನಿರ್ಮಾಣ ಮಾಡಿರುವ ಶುದ್ಧ ಕುಡಿಯುವ ನೀರಿನ‌ ಘಟಕ ‘ಅಮೃತಗಂಗೆ’ಯನ್ನು ಉದ್ಘಾಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.