ಬಾಗೇಪಲ್ಲಿ: ಅಂತರ್ಜಾತಿ ಮದುವೆಗೆ ಪೋಷಕರು ವಿರೋಧಿಸುತ್ತಿದ್ದಾರೆ. ತಮಗೆ ರಕ್ಷಣೆ ನೀಡಬೇಕು ಎಂದು ಯುವಪ್ರೇಮಿಗಳಿಬ್ಬರು ಪೊಲೀಸರ ರಕ್ಷಣೆಗೆ ಮೊರೆ ಹೋಗಿದ್ದಾರೆ.
ಬಾಗೇಪಲ್ಲಿಯ ಕೊತ್ತಕೋಟೆ ಗ್ರಾಮದ ಸಿ.ಎನ್. ಚಿನ್ನಪ್ಪರೆಡ್ಡಿ (28) ಮತ್ತು ಬೇರೆ ಸಮುದಾಯದ ಯುವತಿ ಕೆ.ಸಿ.ಅನಿತಾ (22) ನಾಲ್ಕು ವರ್ಷದಿಂದ ಪ್ರೀತಿಸಿದ್ದಾರೆ. ಇಬ್ಬರೂ ಬೆಂಗಳೂರಿನಲ್ಲಿ ವಾಸವಾಗಿದ್ದು, ಮದುವೆಯಾಗಲು ಮುಂದಾಗಿದ್ದಾರೆ. ಹೀಗಾಗಿ, ಸೂಕ್ತ ರಕ್ಷಣೆ ನೀಡಬೇಕು ಎಂದು ಪೊಲೀಸರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.