ಗೌರಿಬಿದನೂರು: ಯುದ್ಧ ಪೀಡಿತ ಇರಾನ್‌ನಲ್ಲಿದ್ದ ತಾಲ್ಲೂಕಿನ ಅಲೀಪುರದ 105 ಮಂದಿ ಸ್ವಗ್ರಾಮಕ್ಕೆ ಮರಳಿದ್ದಾರೆ.
ಇರಾನ್ ರಾಜಧಾನಿ ಟೆಹರಾನ್, ಕುಮ್, ಮಶಾದ್ ಸೇರಿದಂತೆ ವಿವಿಧ ನಗರಗಳಲ್ಲಿ ವಿದ್ಯಾಭ್ಯಾಸ, ಯಾತ್ರೆ, ವ್ಯಾಪಾರಕ್ಕೆ ಅಲೀಪುರ ಜನರು ತೆರಳಿದ್ದರು.
ಭಾರತ ಸರ್ಕಾರ ಈ ನಾಗರಿಕರನ್ನು ಸುರಕ್ಷಿತವಾಗಿ ಕರೆತರುವ ಕೆಲಸ ಪ್ರಾರಂಭಿಸಿತ್ತು. ಈ ಭಾಗವಾಗಿ ನಾಲ್ಕು ವಿಮಾನಗಳಲ್ಲಿ ಒಟ್ಟು 105 ಮಂದಿ ಸುರಕ್ಷಿತವಾಗಿ ಅಲೀಪುರಕ್ಕೆ ಬಂದು ತಲುಪಿದ್ದಾರೆ.
ಅರಬಿಕ್ ಶಿಕ್ಷಣ ಪಡೆಯಲು ಕುಮ್ ನಗರದಲ್ಲಿದ್ದ ಹಲವರನ್ನು ಇರಾನ್ ಸರ್ಕಾರ ಬಿಗಿ ಭದ್ರತೆಯೊಂದಿಗೆ ಕುಮ್ ನಗರದಿಂದ 60 ಗಂಟೆಗಳ ಬಸ್ ಪ್ರಯಾಣದ ನಂತರ ಮಶಾದ್ ನಗರಕ್ಕೆ ತಲುಪಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.