ADVERTISEMENT

ಚಿಕ್ಕಬಳ್ಳಾಪುರ ಮಹಿಳಾ ಕಾಲೇಜಿನ ಅವ್ಯವಸ್ಥೆ: ಸ್ವತಃ ಸ್ವಚ್ಛತೆಗಿಳಿದ ನ್ಯಾ ವೀರಪ್ಪ

​ಪ್ರಜಾವಾಣಿ ವಾರ್ತೆ
Published 7 ಜನವರಿ 2023, 7:49 IST
Last Updated 7 ಜನವರಿ 2023, 7:49 IST
ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಕಾನೂನು ಸೇವಾ ಪ್ರಾಧಿಕಾರದ ರಾಜ್ಯ ಘಟಕದ ಅಧ್ಯಕ್ಷ ವೀರಪ್ಪ, ಸ್ವತಃ ಸ್ವಚ್ಛತಾ ಕಾರ್ಯಕ್ಕೆ ಇಳಿದರು.
ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಕಾನೂನು ಸೇವಾ ಪ್ರಾಧಿಕಾರದ ರಾಜ್ಯ ಘಟಕದ ಅಧ್ಯಕ್ಷ ವೀರಪ್ಪ, ಸ್ವತಃ ಸ್ವಚ್ಛತಾ ಕಾರ್ಯಕ್ಕೆ ಇಳಿದರು.   

ಚಿಕ್ಕಬಳ್ಳಾಪುರ: ನಗರದ ಮಹಿಳಾ ಪದವಿ ಕಾಲೇಜಿನ ಆವರಣದಲ್ಲಿ ಅವ್ಯವಸ್ಥೆ ಮತ್ತು ದುಸ್ಥಿತಿ ಕಂಡು ಕೆಂಡಾಮಂಡಲರಾದ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಕಾನೂನು ಸೇವಾ ಪ್ರಾಧಿಕಾರದ ರಾಜ್ಯ ಘಟಕದ ಅಧ್ಯಕ್ಷ ವೀರಪ್ಪ, ಸ್ವತಃ ಸ್ವಚ್ಛತಾ ಕಾರ್ಯಕ್ಕೆ ಇಳಿದರು.

ಕಾಲೇಜು ತಾತ್ಕಾಲಿಕವಾಗಿ ನಡೆಯುತ್ತಿರುವ ಸಿಟಿಜನ್ ಕ್ಲಬ್ ಆವರಣಕ್ಕೆ ಬಂದ ನ್ಯಾಯಮೂರ್ತಿ, ಶೌಚಾಲಯ, ಕಾಲೇಜಿನ‌ ಆವರಣ ಪರಿಶೀಲಿಸಿದರು.

ಆವರಣದಲ್ಲಿ ಆಳೆತ್ತರದ ಗಿಡಗಂಟಿಗಳು ಬೆಳೆದಿದ್ದವು. ಅನೈರ್ಮನ್ಯ ಹೆಚ್ಚಿತ್ತು. ಪ್ರಾಂಶುಪಾಲರನ್ನು ತರಾಟೆಗೆ ತೆಗೆದುಕೊಂಡರು. ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ ವ್ಯವಸ್ಥೆ ಸರಿಪಡಿಸುವುದಾಗಿ ಹೇಳಿದರು. 30 ನಿಮಿಷಕ್ಕೂ ಹೆಚ್ಚು ಕಾಲ ಸ್ಥಳದಲ್ಲಿದ್ದರು‌. ಅಗತ್ಯ ಸಲಕರಣೆಗಳನ್ನು ತರಿಸಿ ನಾನೇ ಸ್ವಚ್ಛತೆ ಮಾಡುತ್ತೇನೆ. ನಂತರವೇ ಇಲ್ಲಿಂದ ತೆರಳುವುದು ಎಂದರು.

ನಂತರ ಅಲ್ಲಿಂದ ನೂತನವಾಗಿ ನಿರ್ಮಾಣ ಆಗುತ್ತಿರುವ ಕಾಲೇಜು ಕಟ್ಟಡದ ಸ್ಥಳಕ್ಕೆ ಭೇಟಿ ನೀಡಿದರು. ಕಳೆದ 9 ವರ್ಷದಿಂದ ಕಟ್ಟಡ ಕಾಮಗಾರಿ ತೆವಳುತ್ತ ಸಾಗಿದೆ. ಈ ಬಗ್ಗೆ ಮಾಹಿತಿ ಪಡೆದರು.

ಎಂಜಿನಿಯರ್ ಎರಡು ತಿಂಗಳಲ್ಲಿ ಕಾಮಗಾರಿ ಪೂರ್ವ ಗೊಳಿಸುವ ಭರವಸೆ ನೀಡಿದರು.

ಮತ್ತೆ ಎರಡು ತಿಂಗಳ ನಂತರ ಭೇಟಿ ನೀಡುವೆ. ಅಷ್ಟರಲ್ಲಿ ಕಾಮಗಾರಿ ಪೂರ್ಣವಾಗಿರಬೇಕು ಎಂದು ತಾಕೀತು ಮಾಡಿದರು.

ADVERTISEMENT

ನಂತರ ಮತ್ತೆ ಸಿಟಿಜನ್ ಕ್ಲಬ್ ಬಳಿ ಬಂದು ಕುಡುಗೋಲು ಹಿಡಿದು ಸ್ವಚ್ಛತಾ ಕಾರ್ಯಕ್ಕೆ ಇಳಿದರು. ಅವರನ್ನು ವಕೀಲರು, ಜಿಲ್ಲಾ ನ್ಯಾಯಾಧೀಶರು ಅನುಸರಿಸಿದರು.

ಸ್ವಲ್ಪ ಸಮಯದನ ನಂತರ ನಗರಸಭೆ ಪೌರಕಾರ್ಮಿಕರು, ಅಧಿಕಾರಿಗಳು ಜೆಸಿಬಿ ಜತೆ ಸ್ಥಳಕ್ಕೆ ಬಂದು ಇಡೀ ಕಾಲೇಜು ಆವರಣವನ್ನು ಸ್ವಚ್ಛಗೊಳಿಸಿದರು.

ನಗರದಲ್ಲಿ ಎಲ್ಲಿದೆ ಚಿಕ್ಕಬಳ್ಳಾಪುರ ಉತ್ಸವಕ್ಕೆ ಸ್ವಚ್ಚತಾ ಕಾರ್ಯ ನಡೆದಿದೆ. ಎಲ್ಲ ಕಡೆ ಅದ್ದೂರಿಯ ಅಲಂಕಾರ ಮಾಡಲಾಗಿದೆ. ಮತ್ತೊಂದು ಕಡೆ ಖುದ್ದು ನ್ಯಾಯಮೂರ್ತಿಅವರೇ ಕಾಲೇಜು ಆವರಣ ಸ್ವಚ್ಚತಾ ಕಾರ್ಯ ನಡೆಸಿದ್ದು ನಾಗರಿಕರು ವಿದ್ಯಾರ್ಥಿಗಳ ಪ್ರಶಂಸೆಗೆ ಪಾತ್ರವಾಯಿತು.

ಉತ್ಸವಗಳು, ಪ್ರತಿಮೆಗಳ ನಿರ್ಮಾಣ ಮಾಡುತ್ತಾರೆ ಆದರೆ 500 ಮಕ್ಕಳು ಓದುವ ಕಾಲೇಜು ಅಭಿವೃದ್ಧಿ ಮಾಡಲು ಸಾಧ್ಯವಾಗಿಲ್ಲ ಎಂದು ನ್ಯಾಯಮೂರ್ತಿ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.