ಶಿಡ್ಲಘಟ್ಟ: ತಾಲ್ಲೂಕಿನ ವಿವಿಧೆಡೆ ಕಸ್ತೂರಿ ಜಾಲಿ ಗಿಡ ಹೆಸರಿಗೆ ತಕ್ಕಂತೆ ವಿಶೇಷ ಸುಗಂಧ ಭರಿತ ಹಳದಿ ಬಣ್ಣದ ಹೂವುಗಳಿಂದ ಆಕರ್ಷಿಸುತ್ತದೆ.
ಇಂಗ್ಲಿಷ್‌ನಲ್ಲಿ ಸ್ವೀಟ್ ಅಕೇಶಿಯಾ ಎಂದು ಕರೆದರೆ, ಗ್ರಾಮೀಣ ಭಾಷೆಯಲ್ಲಿ ಹೀಕ್ ಜಾಲಿ, ಕಿರಿಜಾಲಿ, ಸಣ್ಣ ಜಾಲಿ ಮುಂತಾದ ಹೆಸರುಗಳಿಂದ ಕರೆಯುತ್ತಾರೆ.
ಎಲ್ಲ ಪ್ರದೇಶಗಳಲ್ಲಿ ಬೆಳೆಯುವ ಕಸ್ತೂರಿ ಜಾಲಿ ಹೊಲಗಳ ಬದುಗಳಲ್ಲಿ, ರಸ್ತೆ ಬದಿಯಲ್ಲಿ, ಹಳ್ಳ ಕೆರೆಗಳ ಪಕ್ಕ, ಉದ್ಯಾನಗಳಲ್ಲಿ ಕಂಡುಬರುತ್ತದೆ.
ಪೊದೆಯಂತೆ ಬೆಳೆಯುವ ಈ ಗಿಡ ಹೆಚ್ಚು ಎತ್ತರ ಬೆಳೆಯುವುದಿಲ್ಲ. ಕಸ್ತೂರಿ ಜಾಲಿ ಗಿಡದ ಬೇರು, ಕಾಂಡ, ಎಲೆ, ಹೂವು, ತೊಗಟೆ ಔಷಧಿಯಾಗಿ ಗ್ರಾಮೀಣ ಪ್ರದೇಶಗಳಲ್ಲಿ ಬಳಸುತ್ತಾರೆ.
‘ಇದರ ಅಂಟನ್ನು ಸಿಹಿ ತಿಂಡಿಗಳಲ್ಲಿ ಉಪಯೋಗಿಸುತ್ತಾರೆ. ಹೂವುಗಳಿಂದ ಸುಗಂಧ ದ್ರವ್ಯ ತಯಾರಿಸುತ್ತಾರೆ. ಪಾರಂಪರಿಕ ಚಿಕಿತ್ಸೆಗಳಲ್ಲಿ ಕಸ್ತೂರಿ ಜಾಲಿಯನ್ನು ನಾಟಿ ವೈದ್ಯರು ಉಪಯೋಗಿಸುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ಮನೆಯಲ್ಲಿ ಕಸ್ತೂರಿ ಜಾಲಿ ಕಾಯಿಗಳನ್ನು ಇಟ್ಟಿರುತ್ತಾರೆ. ನವೆಂಬರ್ ತಿಂಗಳಿನಿಂದ ಇದರ ಹೂವು ಅರಳುತ್ತವೆ’ ಎಂದು ತೋಟಗಾರಿಕಾ ತಜ್ಞ ಸಂತೆ ನಾರಾಯಣಸ್ವಾಮಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.