ADVERTISEMENT

ಕನಕಪುರ | ರೀಲ್ಸ್ ಮಾಡುವ ವಿಚಾರಕ್ಕೆ ಸ್ನೇಹಿತನಿಗೆ ಚಾಕುವಿನಿಂದ ಇರಿತ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 4:15 IST
Last Updated 8 ಫೆಬ್ರುವರಿ 2026, 4:15 IST
   

ಕನಕಪುರ: ರೀಲ್ಸ್ ಮಾಡುವ ವಿಚಾರಕ್ಕೆ ಇಬ್ಬರು ಸ್ನೇಹಿತರ ಮಧ್ಯೆ ಗಲಾಟೆ ನಡೆದು, ಸ್ನೇಹಿತನಿಗೆ ಚಾಕುವಿನಿಂದ ತಿವಿದಿರುವ ಘಟನೆ ತಿಮ್ಮಸಂದ್ರ ಗ್ರಾಮದ ಬಳಿ ನಡೆದಿದೆ. 

ತಾಲ್ಲೂಕಿನ ಕಸಬಾ ಹೋಬಳಿ ತಿಮ್ಮಸಂದ್ರ ಗ್ರಾಮದ ಜಹೀದ್ ಉಲ್ಲಾ ಹಲ್ಲೆಗೊಳಗಾದ ಯುವಕ. ಅದೇ ಗ್ರಾಮದ ಸುಹೇಲ್ ಚಾಕುವಿನಿಂದ ಹಲ್ಲೆ ಮಾಡಿದ ಆರೋಪಿಯಾಗಿದ್ದು, ಆತನ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಸ್ನೇಹಿತರಾದ ಜಹೀದ್ ಉಲ್ಲಾ ಮತ್ತು ಆರೋಪಿ ಸುಹೇಲ್ ಆಗ್ಗಾಗ್ಗೆ ರೀಲ್ಸ್ ಮಾಡುತ್ತಿದ್ದರು. ಜ.31ರಂದು ಜಹೀದ್ ಉಲ್ಲಾಗೆ ಕರೆ ಮಾಡಿದ ಸುಹೇಲ್, ತಿಮ್ಮಸಂದ್ರ ಬಳಿ ಇರುವ ಸ್ಮಶಾನದ ಹತ್ತಿರ ಬರುವಂತೆ ಹೇಳಿದ್ದಾನೆ. ಜಹೀದ್ ಉಲ್ಲಾ ಸ್ಮಶಾನದ ಬಳಿ ಹೋದಾಗ ರೀಲ್ಸ್ ಮಾಡುವ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಈ ವೇಳೆ ಕುಪಿತಗೊಂಡ ಸುಹೇಲ್, ಜಹೀದ್ ಉಲ್ಲಾ ಮೇಲೆ ಚಾಕುವಿನಿಂದ ತಿವಿದಿದ್ದಾನೆ. 

ADVERTISEMENT

ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿ ಜಹೀದ್ ಉಲ್ಲಾ ಪೋಷಕರು, ಆತನನ್ನು ಆಸ್ಪತ್ರೆಗೆ ದಾಖಲಿಸಿದರು. 

ಜಹೀದ್ ಉಲ್ಲಾ ಅವರ ತಂದೆ ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆರೋಪಿ ಸುಹೇಲ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.