ADVERTISEMENT

ಶಿಡ್ಲಘಟ್ಟ: ವಿದ್ಯಾರ್ಥಿಗಳಿಗೆ ವೀರಗಲ್ಲು ಪರಿಚಯ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2021, 9:16 IST
Last Updated 26 ಆಗಸ್ಟ್ 2021, 9:16 IST
ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದಲ್ಲಿ ಜಿಕೆವಿಕೆ ಕೃಷಿ ವಿದ್ಯಾರ್ಥಿಗಳಿಗೆ ಶಾಸನತಜ್ಞ ಕೆ.ಧನಪಾಲ್ ಅವರು ಶಾಸನ, ವೀರಗಲ್ಲುಗಳನ್ನು ಪರಿಚಯ ಮಾಡಿಕೊಟ್ಟರು
ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದಲ್ಲಿ ಜಿಕೆವಿಕೆ ಕೃಷಿ ವಿದ್ಯಾರ್ಥಿಗಳಿಗೆ ಶಾಸನತಜ್ಞ ಕೆ.ಧನಪಾಲ್ ಅವರು ಶಾಸನ, ವೀರಗಲ್ಲುಗಳನ್ನು ಪರಿಚಯ ಮಾಡಿಕೊಟ್ಟರು   

ಶಿಡ್ಲಘಟ್ಟ: ಕೃಷಿ ವಿದ್ಯಾರ್ಥಿಗಳು ಕೃಷಿ ಅಧಿಕಾರಿಗಳಾಗಿ ಹಳ್ಳಿಗಳ ಕಡೆ ಹೊರಟಾಗ ಆಕಸ್ಮಿಕವಾಗಿ ಅವರಿಗೆ ಕಾಣಸಿಗಬಹುದಾದ ವೀರಗಲ್ಲು, ಶಾಸನಗಳ ಬಗ್ಗೆ ಪ್ರಾಥಮಿಕ ಮಾಹಿತಿ ತಿಳಿದಿರುವುದು ಅಗತ್ಯ ಎಂದು ಇತಿಹಾಸ ಅಕಾಡೆಮಿಯ ಸದಸ್ಯ, ಶಾಸನತಜ್ಞ ಕೆ.ಧನಪಾಲ್ ಹೇಳಿದರು.

ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದಲ್ಲಿ ಜಿಕೆವಿಕೆ ಕೃಷಿ ವಿದ್ಯಾರ್ಥಿಗಳ ಕೃಷಿ ಕಾರ್ಯಾನುಭವ ಕಾರ್ಯಕ್ರಮದಲ್ಲಿ ಹಮ್ಮಿಕೊಂಡಿದ್ದ ಶಾಸನ ಮತ್ತು ವೀರಗಲ್ಲುಗಳ ಪ್ರಾಥಮಿಕ ಪರಿಚಯ ಶಿಬಿರದಲ್ಲಿ
ಮಾತನಾಡಿದರು.

ಕರ್ನಾಟಕ ಇತಿಹಾಸ ಅಕಾಡೆಮಿಯ ಸದಸ್ಯರಿಂದ ಐತಿಹಾಸಿಕ ಪರಂಪರೆ ಉಳಿಸಿ ಕಾರ್ಯಕ್ರಮ ಹಮ್ಮಿಕೊಂಡು ಶಾಸನ, ವೀರಗಲ್ಲು, ಸ್ಮಾರಕಗಳನ್ನು ಸಂರಕ್ಷಿಸುವ ಕಾರ್ಯವನ್ನು ನಡೆಸುತ್ತಾ ಬಂದಿದೆಎಂದರು.

ADVERTISEMENT

ಸುತ್ತಮುತ್ತಲ ಹೊಲಗದ್ದೆಗಳಲ್ಲಿದ್ದ ಕೆಲವು ಶಾಸನ, ವೀರಗಲ್ಲುಗಳನ್ನು ವಿದ್ಯಾರ್ಥಿಗಳಿಗೆ ಪ್ರತ್ಯಕ್ಷವಾಗಿ ಪರಿಚಯ ಮಾಡಿಕೊಡಲಾಯಿತು.

ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್‌, ಇತಿಹಾಸ ತಜ್ಞ ಡಿ.ಎನ್.ಸುದರ್ಶನ ರೆಡ್ಡಿ, ಮೂರ್ತಿ, ಮುನೀಂದ್ರ, ನಾರಾಯಣಸ್ವಾಮಿ, ಜಯಂತ್, ಕೃಷ್ಣೇಗೌಡ, ವೆಂಕಟೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.