ADVERTISEMENT

ಮುನಿಯಪ್ಪಗೆ ಸಿಎಂ ಸ್ಥಾನ ನೀಡಿ: ಆದಿಜಾಂಬವ ಮಠದ ಷಡಕ್ಷರ ಮುನಿ ಸ್ವಾಮೀಜಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2025, 7:03 IST
Last Updated 28 ನವೆಂಬರ್ 2025, 7:03 IST
<div class="paragraphs"><p>ಷಡಕ್ಷರ ಮುನಿ ಸ್ವಾಮೀಜಿ</p></div>

ಷಡಕ್ಷರ ಮುನಿ ಸ್ವಾಮೀಜಿ

   

ಚಿಕ್ಕಬಳ್ಳಾಪುರ: ಆಹಾರ ಸಚಿವ ಹಾಗೂ ಮಾದಿಗ ಸಮಾಜದ ಮುಖಂಡ ಕೆ.ಎಚ್.ಮುನಿಯಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಆದಿ ಜಾಂಬವ ಮಠದ ಷಡಕ್ಷರಮುನಿ ಸ್ವಾಮೀಜಿ ಆಗ್ರಹಿಸಿದರು.

ಮಠದ ಸ್ವಾಮೀಜಿ‌ ಅವರು ಆಯಾ ಸಮುದಾಯದ ಹಿತವನ್ನು ಕಾಪಾಡಬೇಕಾದುದು‌ ಆಯಾ ಸಮಾಜದ ಸ್ವಾಮೀಜಿ ಅವರ ಕರ್ತವ್ಯ. ಆ ದಿಕ್ಕಿನಲ್ಲಿ ‌ನಿರ್ಮಲಾನಂದನಾಥ ಸ್ವಾಮೀಜಿ ಅವರು ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಎಂದಿದ್ದಾರೆ. ಅದೇ ರೀತಿಯಲ್ಲಿ ಮಾದಿಗ ಸಮುದಾಯದ ಸ್ವಾಮೀಜಿಯಾಗಿ ಸಮುದಾಯದ ಪರವಾಗಿ ಹಕ್ಕೊತ್ತಾಯ ಮಾಡುತ್ತಿದ್ದೇವೆ ಎಂದರು.

ADVERTISEMENT

ಮುಖ್ಯ ಮಂತ್ರಿ ಸ್ಥಾನದ ಬದಲಾವಣೆ ವಿಚಾರ ರಾಜ್ಯದಲ್ಲಿ ಚರ್ಚೆಗೆ ಒಳಗಾಗಿದೆ. ಆದ್ದರಿಂದ ವಿವಿಧ ಸಮುದಾಯಗಳು ತಮ್ಮ ಸಮುದಾಯದವರು‌ ಸಿ.ಎಂ ಆಗಬೇಕು ಎನ್ನುತ್ತಿದ್ದಾರೆ. ಒಂದು ವೇಳೆ ದಲಿತ ಮುಖ್ಯಮಂತ್ರಿ ಅವರ ವಿಚಾರ ಬಂದರೆ ಮಾದಿಗ ಸಮುದಾಯಕ್ಕೆ ಅವಕಾಶ ನೀಡಬೇಕು. ಕೆ.ಎಚ್. ಮುನಿಯಪ್ಪ‌ ಅವರಿಗೆ ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.

ಕೆ.ಎಚ್.ಮುನಿಯಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಲು ಸಾಧ್ಯವಾಗದಿದ್ದರೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.