ಗೌರಿಬಿದನೂರು: ನಗರದ ಪ್ರಜಾಸೌಧ ಆವರಣದಲ್ಲಿ ತಾಲ್ಲೂಕು ಆಡಳಿತ, ರಾಷ್ಟೀಯ ಹೆದ್ದಾರಿ ಪ್ರಾಧಿಕಾರ, ರೈತ ಸಂಘ, ಕಂದಾಯ ಇಲಾಖೆ, ಭೂ ಮಾಪನ ಇಲಾಖೆ, ಎಸ್‌ಎಲ್ಒ, ಕೆಆರ್‌ಡಿಐಎಲ್ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಸಭೆ ನಡೆಯಿತು.
ಈ ವೇಳೆ ತಹಶೀಲ್ದಾರ್ ಮಹೇಶ್ ಎಸ್.ಪತ್ರಿ ಮಾತನಾಡಿ, ನಗರದ ಕೆಲವು ಭಾಗಗಳಲ್ಲಿ ರಾಷ್ಟೀಯ ಹೆದ್ದಾರಿ ನಿರ್ಮಾಣಕ್ಕೆ ಜಮೀನು ಸ್ವಾಧೀನ ಪಡಿಸಿಕೊಂಡಿದ್ದಾರೆ. ಆದರೆ, ಜಮೀನು ಪೋಡಿಯಾಗದ ಕಾರಣ ಪಹಣಿಗಳಲ್ಲಿ ತಿದ್ದುಪಡಿ ಕಂಡು ಬಂದಿವೆ. ಇನ್ನು ಎರಡ್ಮೂರು ದಿನಗಳಲ್ಲಿ ರೈತರ ಜಮೀನು ಪೋಡಿ ಮಾಡಿಕೊಡಲು ಭೂ ಮಾಪನ ಇಲಾಖೆ ಮತ್ತು ಕಂದಾಯ ಇಲಾಖೆಗೆ ಸೂಚಿಸಲಾಗಿದೆ.
ಗುಂಡಾಪುರ ಮತ್ತು ಮಾದನಹಳ್ಳಿ ಬಳಿ ರಾಷ್ಟೀಯ ಹೆದ್ದಾರಿ ನಿರ್ಮಾಣ ಮಾಡಲಾಗಿದೆ. ಪಕ್ಕದ ಸಂಪರ್ಕ ರಸ್ತೆಗಳು ಕೆಳ ಭಾಗದಲ್ಲಿರುವುದರಿಂದ ಜನರ ಓಡಾಟಕ್ಕೆ ಅಡಚಣೆ ಉಂಟಾಗಿದೆ. ಇದನ್ನು ಬಗೆಹರಿಸಲು ರಾಷ್ಟೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಜೊತೆಗೆ ಹೆದ್ದಾರಿಯಲ್ಲಿನ ಅವೈಜ್ಞಾನಿಕ ಉಬ್ಬುಗಳು ತೆರವುಗೊಳಿಸುವುದು. ಹೈ ಮಾಸ್ ದೀಪಗಳನ್ನು ಅಳವಡಿಸುವುದು. ಡೈರೆಕ್ಷನ್ ಬೋರ್ಡ್ ಅಳವಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಈ ವೇಳೆ ರಾಷ್ಟೀಯ ಹೆದ್ದಾರಿ ಪ್ರಾಧಿಕಾರದ ಎಇಇ ಮಲ್ಲಿಕಾರ್ಜುನ್, ಭೂ ದಾಖಲೆಗಳ ಅಧಿಕಾರಿ ಲಿಖಿತ, ಕೆಆರ್‌ಐಡಿಎಲ್ ಅಧಿಕಾರಿ ನಾಗರಾಜ್, ರವಿಕುಮಾರ್ ಹಸಿರು ಸೇನೆ ಮತ್ತು ರೈತ ಸಂಘದ ತಾಲ್ಲೂಕು ಅಧ್ಯಕ್ಷ ಲೋಕೇಶ್ ಗೌಡ, ಹಿರೇಬಿದನೂರು ರಾಜಣ್ಣ, ಚೀಕಟಗೆರೆ ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.