
ಪ್ರಜಾವಾಣಿ ವಾರ್ತೆ
ಗೌರಿಬಿದನೂರು: ಡಾ.ಎಚ್.ಎನ್ ಕಲಾ ಭವನದಲ್ಲಿ ಗೌತಮ ಬುದ್ಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘ, ಅಕ್ಷರ ಬೆಳಕು ಸಾಂಸ್ಕೃತಿಕ ವೇದಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಿರ್ದಿಗಂತ ಮೈಸೂರು ಆಶ್ರಯದಲ್ಲಿ ಸಾಂಸ್ಕೃತಿಕ ಸಂಗಮ ಕಾರ್ಯಕ್ರಮ ಶನಿವಾರ ಆಯೋಜನೆ ಮಾಡಲಾಗಿತ್ತು.
ಮಲಯಾಳಂನ ಪ್ರಸಿದ್ಧ ಬರಹಗಾರ ವೈಕಂ ಮೊಹಮ್ಮದ್ ಬಶೀರ್ ಅವರ ‘ಮದಿಲುಗಳ್’ ಕಾದಂಬರಿಯ ಆಧಾರಿತ ಪೊಲಿಟಿಕಲ್ ಪ್ರಿನ್ಸೆಸ್ ನಾಟಕ ಪ್ರದರ್ಶನ ನಡೆಯಿತು.
ರಂಗ ಕಲಾವಿದ ಬಿ.ಎನ್ ರಾಯ್, ನಿರ್ದೇಶಕ ಅನುಷ್ ಶೆಟ್ಟಿ, ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲೆ ಡಾ. ಶೈಲಜಾ ಸಪ್ತಗಿರಿ, ಸೋಮಯ್ಯ, ವೆಂಕಟೇಶ್, ಕೆ.ವಿ ನಾಯಕ್ ಶಾಮೀರ್ ವಿ ನರಸಿಂಹಪ್ಪ, ವೈಟಿ ಪ್ರಸನ್ನ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.