ಪಾತಪಾಳ್ಯ: ಚೇಳೂರು ಮತ್ತು ಬಾಗೇಪಲ್ಲಿಯ ಮುಖ್ಯ ರಸ್ತೆಯು ಪಾತಪಾಳ್ಯ ಗ್ರಾಮದ ಕೆರೆ ಪಕ್ಕದಲ್ಲಿ ಹಾದು ಹೋಗುವ ಬೈಪಾಸ್ ರಸ್ತೆಯಲ್ಲಿ ಮೂರು ಕಡೆ ಮೋರಿ ಕಾಮಗಾರಿ ಸಮರ್ಪಕವಾಗಿ ನಡೆದಿಲ್ಲ. ಮೋರಿಗಳ ಬಳಿ ಗುಣಿ ಮುಚ್ಚದೇ ಇರುವುದರಿಂದ ವಾಹನ ಸವಾರರು ತೊಂದರೆಪಡುವಂತಾಗಿದೆ.
ಕಾಮಗಾರಿ ನಡೆದಿರುವ ಸ್ಥಳದಲ್ಲಿ ಮೋರಿಯನ್ನು ರಸ್ತೆಗೆ ಸಮತಟ್ಟು ಮಾಡದೆ ಎರಡು ಮೂರು ಅಡಿಗಳಷ್ಟು ತಗ್ಗು ಮಾಡಲಾಗಿದೆ. ಅದಕ್ಕೆ ಮಣ್ಣುನ್ನು ಸಹ ಹಾಕದೇ ಹಾಗೇ ಬಿಟ್ಟಿದ್ದಾರೆ ಎಂದು ಸಾರ್ವಜನಿಕ ದೂರಿದರು.
ದ್ವಿಚಕ್ರ ವಾಹನ, ಕಾರು ಮತ್ತಿತರ ಸಣ್ಣವಾಹನ ಚಲಿಸುವ ವೇಳೆ ತೊಂದರೆಯಾಗುತ್ತಿದೆ. ಮೋರಿ ಅಳವಡಿಸಿದ ಸ್ಥಳದಲ್ಲಿ ಡಾಂಬರೀಕಣ ಮಾಡದೇ ಇರುವುದರಿಂದ ಮಳೆ ಬಂದರೆ ಇನ್ನಷ್ಟು ತೊಂದರೆಯಾಗಲಿದೆ. ಮೋರಿ ಮಾಡಿರುವ ಸ್ಥಳದಲ್ಲಿ ಡಾಂಬರು ಹಾಕಬೇಕು ಎಂದು ಪಾತಪಳ್ಯದ ಶ್ರೀನಿವಾಸ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.