ADVERTISEMENT

ಚಿಕ್ಕಬಳ್ಳಾಪುರ: ಕೊಚ್ಚಿಹೋಗುತ್ತಿದ್ದವರ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2021, 4:28 IST
Last Updated 18 ನವೆಂಬರ್ 2021, 4:28 IST
ಚಿಂತಾಮಣಿ ತಾಲ್ಲೂಕಿನ ಬ್ರಾಹ್ಮಣರಹಳ್ಳಿ ಸಮೀಪ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದವರನ್ನು ಜೆಸಿಬಿ ಮೂಲಕ ರಕ್ಷಣೆ ಮಾಡುತ್ತಿರುವುದು
ಚಿಂತಾಮಣಿ ತಾಲ್ಲೂಕಿನ ಬ್ರಾಹ್ಮಣರಹಳ್ಳಿ ಸಮೀಪ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದವರನ್ನು ಜೆಸಿಬಿ ಮೂಲಕ ರಕ್ಷಣೆ ಮಾಡುತ್ತಿರುವುದು   

ಚಿಂತಾಮಣಿ: ತಾಲ್ಲೂಕಿನ ಮುಂಗಾನಹಳ್ಳಿ ಹೋಬಳಿಯ ಬ್ರಾಹ್ಮಣರಹಳ್ಳಿ ಬಳಿ ಕುಶಾವತಿ ನದಿಯ ಸೇತುವೆಯ ಮೇಲೆ ದ್ವಿಚಕ್ರವಾಹನ ಸಮೇತ ಕೊಚ್ಚಿಹೋಗುತ್ತಿದ್ದ ಇಬ್ಬರನ್ನು ಗ್ರಾಮಸ್ಥರು ಜೆಸಿಬಿ ಮೂಲಕ ರಕ್ಷಣೆ ಮಾಡಿದ್ದಾರೆ.

ಮುಂಗಾನಹಳ್ಳಿಯಲ್ಲಿ ಮಂಗಳವಾರ ರಾತ್ರಿ ಜೋರು ಮಳೆಯಾಗಿತ್ತು. ಬ್ರಾಹ್ಮಣರಹಳ್ಳಿ ಬಳಿ ಕುಶಾವತಿ ನದಿಗೆ ನಿರ್ಮಾಣ ಮಾಡಿರುವ ಸೇತುವೆಯ ಮೇಲೆ ನೀರು ಹರಿಯುತ್ತಿತ್ತು. ಬುಧವಾರ ಎಸ್.ರಾಗುಟ್ಟಹಳ್ಳಿಯ ವರುಣ್ ಮತ್ತು ಪವನ್ ತಮ್ಮ ಗ್ರಾಮದಿಂದ ಶೆಟ್ಟಿಕೆರೆ ಗ್ರಾಮಕ್ಕೆ ದ್ವಿಚಕ್ರವಾಹನದಲ್ಲಿ ಬ್ರಾಹ್ಮಣಹಳ್ಳಿಯ ಮೂಲಕ ಹೋಗುತ್ತಿದ್ದರು. ನೀರಿದ ರಭಸಕ್ಕೆ ವಾಹನ ಸಮೇತ ಇಬ್ಬರು ಸೇತುವೆಯಿಂದ ಕೊಚ್ಚಿಕೊಂಡು ಹೋಗಿದ್ದಾರೆ.

ಸುತ್ತಮುತ್ತಲು ಜಮೀನಗಳಿದ್ದ ಗ್ರಾಮಸ್ಥರು ಕೂಡಲೇ ಸಮಯಪ್ರಜ್ಞೆ ತೋರಿ ನೀರಿನಲ್ಲಿ ಕೊಚ್ಚಿ ಹೋಗಿ ಅದೃಷ್ಟವಶಾತ್ ಮರದ ಆಸರೆ ಪಡೆದಿದ್ದ ಇಬ್ಬರಿಗೆ ಹಗ್ಗ ನೀಡಿದ್ದಾರೆ. ತಕ್ಷಣ ಗ್ರಾಮದಿಂದ ಜೆಸಿಬಿ ತರಿಸಿಕೊಂಡು ರಕ್ಷಣೆ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.