
ಪ್ರಜಾವಾಣಿ ವಾರ್ತೆ
ಗುಡಿಬಂಡೆ: ತಾಲ್ಲೂಕಿನ ಚಿನ್ನಹಳ್ಳಿ, ಬ್ರಾಹ್ಮಣರಹಳ್ಳಿ, ಇಡ್ರಹಳ್ಳಿ, ಲಗುಮೇನಹಳ್ಳಿ ಗ್ರಾಮಗಳ ವ್ಯಾಪ್ತಿಯ ರೈತರ ಜಮೀನುಗಳಲ್ಲಿ ಭಾನುವಾರ ರಾತ್ರಿ ಪಂಪ್‌ಸೆಟ್‌ಗಳ ವಿದ್ಯುತ್ ಕೇಬಲ್ ಕದ್ದು ಕಳ್ಳರು ಪರಾರಿಯಾಗಿದ್ದಾರೆ.
ತಾಲ್ಲೂಕಿನ ಬ್ರಾಹ್ಮಣರಹಳ್ಳಿ-ಚಿನ್ನಹಳ್ಳಿ- ಇಡ್ರಹಳ್ಳಿ ಮಾರ್ಗ ಮತ್ತು ಸುತ್ತಲಿನ ಪ್ರದೇಶದ ನರಸಿಂಹಮೂರ್ತಿ, ಮಾದೇಶ್, ಶಿವರಾಜ್, ಅವುಳಪ್ಪ, ಸತೀಶ್ ಕುಮಾರ್ ಹಾಗೂ ರಮೇಶ್ ಎಂಬುವರು ಸೇರಿದಂತೆ ಏಳೆಂಟು ರೈತರ ಜಮೀನುಗಳಲ್ಲಿನ
ಕೊಳವೆಬಾವಿ (ಬೋರ್‌ವೆಲ್)ಯಿಂದ ಯಂತ್ರಗಾರಗಳವರೆಗಿನ ಕೇಬಲ್ ಮತ್ತು ಪಂಪ್‌ಹೌಸ್‌ನಲ್ಲಿ ಇಟ್ಟಿದ್ದ ಪಂಪ್ ಮೋಟಾರುಗಳು ಹಾಗೂ ಪ್ಯಾನಲ್ ಬೋರ್ಡ್‌ಗಳು
ಕಳ್ಳತನವಾಗಿವೆ.
ರೈತರು ಜಮೀನುಗಳಲ್ಲಿ ಇಲ್ಲದಿರುವ ಸಮಯದಲ್ಲಿ ಕಳ್ಳರು ಈ ಕೃತ್ಯವೆಸಗಿದ್ದಾರೆ.
ಈ ಸಂಬಂಧ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.