ADVERTISEMENT

ಅಬ್ಬರಿಸಿದ ಮಳೆ; ತಣಿದ ಚಿಕ್ಕಬಳ್ಳಾಪುರ

​ಪ್ರಜಾವಾಣಿ ವಾರ್ತೆ
Published 2 ಜೂನ್ 2024, 15:16 IST
Last Updated 2 ಜೂನ್ 2024, 15:16 IST
ಚಿಕ್ಕಬಳ್ಳಾಪುರದಲ್ಲಿ ಸುರಿಯುತ್ತಿದ್ದ ಮಳೆಯಲ್ಲಿ ವ್ಯಕ್ತಿಯೊಬ್ಬರು ಕೊಡೆ ಹಿಡಿದು ನಡೆದ ಕ್ಷಣ
ಚಿಕ್ಕಬಳ್ಳಾಪುರದಲ್ಲಿ ಸುರಿಯುತ್ತಿದ್ದ ಮಳೆಯಲ್ಲಿ ವ್ಯಕ್ತಿಯೊಬ್ಬರು ಕೊಡೆ ಹಿಡಿದು ನಡೆದ ಕ್ಷಣ   

ಚಿಕ್ಕಬಳ್ಳಾಪುರ: ಬಹು ದಿನಗಳ ನಂತರ ಚಿಕ್ಕಬಳ್ಳಾಪುರದಲ್ಲಿ ಮಳೆ ಅಬ್ಬರಿಸಿತು. ಭಾನುವಾರ ಸಂಜೆ 6.30ರಿಂದ ಆರಂಭವಾದ ಮಳೆ 7.30ರವರೆಗೆ ಅಬ್ಬರಿಸಿತು. ಬಿಸಿಲಿನಿಂದ ದಣಿದಿದ್ದ ಚಿಕ್ಕಬಳ್ಳಾಪುರ ಮಳೆಯಲ್ಲಿ ತೊಯ್ಯಿತು.

ಹೀಗೆ ನಿರಂತವಾಗಿ ಜೋರು ಮಳೆ ಇತ್ತೀಚಿನ ದಿನಗಳಲ್ಲಿ ಚಿಕ್ಕಬಳ್ಳಾಪುರದಲ್ಲಿ ಸುರಿದಿರಲಿಲ್ಲ. ಸಂಜೆ ಮೋಡ ಕಟ್ಟಿದ್ದು ಮಳೆಯ ವಾತಾವರಣವಿತ್ತು. ಕತ್ತಲು ಆವರಿಸುತ್ತಿದ್ದಂತೆ ಜೋರು ಮಳೆ ಸುರಿಯಿತು. 

ನಗರದ ಬಿಬಿ ರಸ್ತೆ, ಎಂ.ಜಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಮಳೆಯ ನೀರು ತುಂಬಿತ್ತು. ಚರಂಡಿಗಳು ಸಹ ತುಂಬಿ ಹರಿದವು. ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿಯೂ ಉತ್ತಮವಾಗಿ ಮಳೆ ಸುರಿಯಿತು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.