ADVERTISEMENT

ರಾಜೀವ್ ಗೌಡ ರಾದ್ಧಾಂತ: ಶಿಡ್ಲಘಟ್ಟದಲ್ಲಿ ಬ್ಯಾನರ್ ತೆರವು ಕಾರ್ಯಾಚರಣೆ ಜೋರು

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 3:27 IST
Last Updated 17 ಜನವರಿ 2026, 3:27 IST
ಶಿಡ್ಲಘಟ್ಟದಲ್ಲಿ ಫ್ಲೆಕ್ಸ್, ಬ್ಯಾನರ್‌ಗಳನ್ನು ನಗರಸಭೆ ಸಿಬ್ಬಂದಿ ತೆರವುಗೊಳಿಸಿದರು
ಶಿಡ್ಲಘಟ್ಟದಲ್ಲಿ ಫ್ಲೆಕ್ಸ್, ಬ್ಯಾನರ್‌ಗಳನ್ನು ನಗರಸಭೆ ಸಿಬ್ಬಂದಿ ತೆರವುಗೊಳಿಸಿದರು   

ಶಿಡ್ಲಘಟ್ಟ: ಝೈದ್ ಖಾನ್ ನಟನೆಯ ‘ಕಲ್ಟ್’ ಸಿನಿಮಾ ಪ್ರಚಾರದ ಫ್ಲೆಕ್ಸ್ ತೆರವುಗೊಳಿಸಿದ ಕಾರಣ ನಡೆದ ರಾದ್ಧಾಂತ ಬೆನ್ನಲ್ಲೆ ನಗರದಲ್ಲಿನ ಎಲ್ಲ ಬ್ಯಾನರ್, ಫ್ಲೆಕ್ಸ್ ಮತ್ತು ಬಂಟಿಂಗ್ಸ್‌ಗಳನ್ನು ನಗರಸಭೆ ಅಧಿಕಾರಿ ಹಾಗೂ ಸಿಬ್ಬಂದಿ ತೆರವುಗೊಳಿಸುವ ಕಾರ್ಯಕ್ಕೆ ಶುಕ್ರವಾರ ಇಳಿದಿದ್ದಾರೆ.

ನಗರದ ಆಯಕಟ್ಟಿನ ಸ್ಥಳಗಳು, ಜನ ನಿಬಿಡ ಸ್ಥಳಗಳು, ತಾಲ್ಲೂಕು ಕಚೇರಿ, ಬಸ್ ನಿಲ್ದಾಣ, ನಗರದಲ್ಲಿ ಸಾಗುವ ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕದಲ್ಲಿ ಅಳವಡಿಸಿದ್ದ ಫ್ಲೆಕ್ಸ್, ಬ್ಯಾನರ್‌, ಶ್ರದ್ಧಾಂಜಲಿ ಫೋಟೋಗಳು, ಬಂಟಿಂಗ್ಸ್‌ ತೆರವುಗೊಳಿಸಲಾಯಿತು.

ನಗರದ ಕೋಟೆ ವೃತ್ತದಲ್ಲಿ ಅಳವಡಿಸಿದ್ದ ಕಲ್ಟ್ ಸಿನಿಮಾದ ಫ್ಲೆಕ್ಸ್‌ ತೆರವುಗೊಳಿಸಿದ್ದಕ್ಕೆ ನಗರಸಭೆ ಪೌರಾಯುಕ್ತೆ ಜಿ.ಅಮೃತ ಅವರಿಗೆ ಕರೆ ಮಾಡಿದ್ದ ಕಾಂಗ್ರೆಸ್ ಮುಖಂಡ ರಾಜೀವ್‌ಗೌಡ ಅವರು ಏಕ ವಚನದಲ್ಲಿ ನಿಂದಿಸಿದ್ದರು. ಈ ಹಿಂದೆ ಸಿ.ಎಂ ಸಿದ್ದರಾಮಯ್ಯ ಅವರು ಶಿಡ್ಲಘಟ್ಟಕ್ಕೆ ಆಗಮಿಸಿದ್ದಾಗ ನನ್ನ ಬ್ಯಾನರ್ ತೆಗೆದು ಬೇರೆಯವರ ಬ್ಯಾನರ್ ಕಟ್ಟಿಸಿದ್ದನ್ನು ನೆನಪಿಸಿ ಬೈದಿದ್ದರು. ನನ್ನ ಇನ್ನೊಂದು ಮುಖ ಗೊತ್ತಿಲ್ಲ, ನನ್ನ ತಾಕತ್ತು ಏನೆಂದು ತೋರಿಸಬೇಕಾಗುತ್ತದೆ ಎಂದು ಧಮ್ಕಿ ಹಾಕಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.