ಚಿಕ್ಕಬಳ್ಳಾಪುರ: ಪೋಪ್ ಫ್ರಾನ್ಸಿಸ್ ಅವರ ನಿಧನದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಎರಡು ದಿನಗಳ ಕಾಲ ಶೋಕಾಚರಣೆ ಆಚರಿಸಲಾಗುತ್ತಿದೆ. ಈ ಪ್ರಯುಕ್ತ ಏ.23 ಮತ್ತು 24ರಂದು ನಗರದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಭವನ ಉದ್ಘಾಟನೆ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಂದೂಡಲಾಗಿದೆ.
ಮಂಗಳವಾರ ಸಂಜೆ ಈ ಕುರಿತು ಕಸಾಪ ಪದಾಧಿಕಾರಿಗಳು ಹಾಗೂ ಕನ್ನಡ ಸಂಘಟನೆಗಳ ಜೊತೆ ಸಭೆ ನಡೆಸಿದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಕಾರ್ಯಕ್ರಮ ಮುಂದೂಡಿಕೆಯನ್ನು ಪ್ರಕಟಿಸಿದರು.
‘ಈ ಕಾರ್ಯಕ್ರಮಗಳು ನಡೆಯುವ ಮುಂದಿನ ದಿನಾಂಕವನ್ನು ತಿಳಿಸಲಾಗುವುದು’ ಎಂದರು.
ಜಿಲ್ಲಾ ಮಟ್ಟದ 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಕನ್ನಡ ಭವನ ಉದ್ಘಾಟನೆ ಪ್ರಯುಕ್ತ ಈಗಾಗಲೇ ಎಲ್ಲ ತಯಾರಿಗಳು ಸಹ ನಡೆದಿವೆ. ಆಹ್ವಾನ ಪತ್ರಿಕೆಗಳು ಹಂಚಿಕೆಯಾಗಿವೆ. ಊಟ ತಿಂಡಿ ವ್ಯವಸ್ಥೆಗೆ ತರಕಾರಿ ಹಾಗೂ ಆಹಾರ ಸಾಮಗ್ರಿಗಳನ್ನೂ ತರಲಾಗಿದೆ. ಹೋಳಿಗೆಗಳು ಸಹ ಸಿದ್ಧವಾಗಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.