
ಬಾಗೇಪಲ್ಲಿ: ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಶನಿವಾರ ಸರ್ವಜ್ಞ ಜಯಂತಿ ನಡೆಯಿತು.
ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೆಂಕಟೇಶಪ್ಪ ಮಾತನಾಡಿ, ‘ಸಮಾಜದಲ್ಲಿ ಜಾತಿ, ವರ್ಗ, ವರ್ಣಬೇಧ ಎನ್ನದೇ ಸರ್ವ ಜನರ ಒಳಿತಿಗಾಗಿ ಸರ್ವಜ್ಞ ತಮ್ಮ ವಚನಗಳ ಮೂಲಕ ಸಂದೇಶ ಸಾರಿದ್ದಾರೆ. ಸಮಾಜದಲ್ಲಿ ಇಂದಿಗೂ ಸಹ ಮೌಢ್ಯತೆ, ಕಂದಾಚಾರ, ಅನಿಷ್ಟ ಪದ್ಧತಿ, ಬಾಲ್ಯವಿವಾಹ, ಕೋಮುಗಲಭೆಗಳ ನಡೆಯುತ್ತಿರುವುದು ದುರಂತ’ ಎಂದರು.
‘ನವ ಸಮಾಜ ನಿರ್ಮಾಣ ಆಗಬೇಕಾದರೆ, ಪ್ರತಿಯೊಬ್ಬರು ಜಾಗೃತರಾಗಬೇಕು. ಅನೇಕ ತಂತ್ರಜ್ಞಾನಗಳ ಆವಿಷ್ಕಾರ, ಅಧ್ಯಯನ ನಡೆದಿದೆ. ಇಂತಹಾ ಪರಿಸ್ಥಿತಿಯಲ್ಲಿ ಕವಿಗಳು, ವಚನಕಾರರು, ಸಂತರು, ಸೂಫಿಗಳು ಸೇರಿದಂತೆ ಅನೇಕ ಮಹನೀಯರ ಆದರ್ಶ, ನಡೆ, ನುಡಿಗಳು ಜೀವನದಲ್ಲಿ ಪಾಲಿಸಬೇಕು’ ಎಂದು ತಿಳಿಸಿದರು.
ಶಿಕ್ಷಣ ಅಧಿಕಾರಿ ಎಂ.ಎನ್.ಮಂಜುನಾಥ್ ಮಾತನಾಡಿ, ‘ಸಮಾಜದ ಬಡವ, ಶ್ರೀಮಂತ, ಮೇಲು-ಕೀಳು ಎಂಬ ತಾರತಮ್ಯ ಹೋಗಲಾಡಿಸಲು ಸರ್ವಜ್ಞ ತ್ರಿಪದಿ ರಚಿಸಿದ್ದಾರೆ. ಸರ್ವಜ್ಞರ ತ್ರಿಪದಿಗಳನ್ನು ಪ್ರತಿಯೊಬ್ಬರು ಓದಬೇಕು. ಶಾಲಾ, ಕಾಲೇಜುಗಳಲ್ಲಿ ಸರ್ವಜ್ಞರ ತ್ರಿಪದಿ ಓದಿಸುವ ಮೂಲಕ ಸರ್ವಜ್ಞ ಜಯಂತಿ ಆಚರಿಸಬೇಕಾಗಿದೆ’ ಎಂದರು.
ಮಂಜುನಾಥ್, ಎಂ.ಶ್ರೀನಿವಾಸ್, ಬಾಬು, ಕೆ.ಎನ್.ಹರೀಶ್, ಬಿ.ವಿ.ಶಿವಯ್ಯ, ಕೃಷ್ಣಪ್ಪ, ಪ್ರಭು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.