ಶಿಡ್ಲಘಟ್ಟ(ಸಾದಲಿ): ತಾಲ್ಲೂಕಿನ ಸಾದಲಿ ಹೋಬಳಿಯ ಎಸ್.ದೇವಗಾನಹಳ್ಳಿಯಲ್ಲಿ ಲಕ್ಷ್ಮಿವೆಂಕಟೇಶ್ವರಸ್ವಾಮಿ ಎಜುಕೇಷನಲ್ ಟ್ರಸ್ಟ್ ಹಾಗೂ ಅಂಭ ಕನಕದುರ್ಗ ದೇವಿ ದೇವಾಲಯ ಸೇವಾ ಸಮಿತಿಯಿಂದ ಶುಕ್ರವಾರ ನಂದಿ ಉತ್ಸವ 2025 ನಡೆಯಿತು.
ನಂದಿಶ್ವರ ಬೃಂಗೀಶ್ವರ ಸೋಮೇಶ್ವರ ದೇವರಿಗೆ ಅಭಿಷೇಕ ಹಾಗೂ ಪ್ರಾಕಾರೋತ್ಸವ ನಡೆಸಲಾಯಿತು. ಯರ್ರಾನಾಗೇನಹಳ್ಳಿಯ ಕೃಷ್ಣಪ್ಪ ಮತ್ತು ತಂಡದಿಂದ ಮನಸೂರೆಯ ನಾದಸ್ವರ ಆಯೋಜಿಸಲಾಗಿತ್ತು. ಮಂಗಳಾರತಿ ನೀಡಿ ಪ್ರಸಾದ ವಿನಿಯೋಗಿಸಲಾಯಿತು.
ಯಶವಂತ್ ಸ್ಕೂಲ್ ಆಫ್ ಡ್ಯಾನ್ಸ್ ನೃತ್ಯ ನಿರ್ದೇಶಕ ಮಂಚನಬಲೆ ಎಂ. ಶ್ರೀನಿವಾಸ್ ತಂಡದ ಸಾಮೂಹಿಕ ನೃತ್ಯ, ರಾಜ್ ಡ್ಯಾನ್ಸ್ ನಿರ್ದೇಶಕ ರಾಜ್ ಮತ್ತು ತಂಡದಿಂದ ನೃತ್ಯ ಕಾರ್ಯಕ್ರಮ, ಕಲಾವಿದೆ ಎನ್.ಭುವನೇಶ್ವರಿ ಭರತನಾಟ್ಯ ಪ್ರದರ್ಶಿಸಿದರು. ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಿ.ವಿ. ಓಬಳಪ್ಪ ಮಾತನಾಡಿ, ಗ್ರಾಮೀಣ ಕಲೆ ಹಾಗೂ ಪ್ರವಾಸಿ ಕ್ಷೇತ್ರಗಳ ಪರಿಚಯ ಮಾಡುವ ಮೂಲಕ ಸಂಸ್ಕೃತಿಯನ್ನು ಪಸರಿಸುವ ಕೆಲಸವಾಗಬೇಕಿದೆ. ವಿವಿಧತೆಯಲ್ಲಿ ಏಕತೆಯಿರುವ ನಮ್ಮ ಸಂಸ್ಕೃತಿ ಮತ್ತು ಜಾನಪದವನ್ನು ಹಬ್ಬದ ರೀತಿ ಆಚರಣೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಡಿ.ವಿ. ಪ್ರಸಾದ್, ಸೋಮೇಶ್ವರದ ರವಿಕುಮಾರ್ ಶರ್ಮಾ, ಡಿ.ಎಸ್. ಪದ್ಮಪ್ರಭು, ಎಂ. ಶ್ರೀನಿವಾಸ್, ವಿಜಯಕುಮಾರ, ಡಿ.ಎನ್. ರವಿಚಂದ್ರ, ರಾಮದಾಸ್, ಡಿ.ವಿ. ಶ್ರೀನಿವಾಸ್ ಮೂರ್ತಿ, ಶಿವಕುಮಾರ್, ಗೋವಿಂದ ರಾಜ್, ಲಕ್ಷ್ಮಿದೇವಮ್ಮ, ಗಾಯತ್ರಿ, ಶ್ರೀನಿವಾಸ್, ದೀಪಕ್, ಬಾಲ ಗಂಗಾಧರ್, ಅನಂತ ಕುಮಾರ, ಡಿ.ಎಲ್. ನಾಗೇಶ್, ಡಿ.ಆರ್. ಶ್ರೀನಿವಾಸ್ ಮೂರ್ತಿ, ಡಿ.ಜಿ. ರಾಘವೇಂದ್ರ ರಾವ್, ಡಿ.ಟಿ. ಶ್ರೀನಿವಾಸ್ ಮೂರ್ತಿ, ಶ್ರೀನಿವಾಸ್, ಗಣೇಶಪ್ಪ, ಗಂಗಾಧರ, ರಾಮಣ್ಣ ವೈ.ಎ. ನರಸಿಂಹಪ್ಪ, ಶ್ರೀನಿವಾಸಪ್ಪ, ಕೊಂಡಪ್ಪ, ರಾಜೇಶ್, ಅಭಿಲಾಷ್, ಯಶವಂತ, ಸಂಜಯ್, ಸೋಮು, ಶೇಖರ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.