
ಶಿಡ್ಲಘಟ್ಟ: ತಾಲ್ಲೂಕಿನ ಜಂಗಮಕೋಟೆ ಕ್ರಾಸ್‌ನಲ್ಲಿನ ಜಂಗಮಕೋಟೆ ರೇಷ್ಮೆ ರೈತ ಉತ್ಪಾದಕರ ಕಂಪನಿಗೆ ನಬಾರ್ಡ್‌ನ ಜಿಲ್ಲಾ ಪ್ರಾದೇಶಿಕ ಉಪ ವ್ಯವಸ್ಥಾಪಕಿ ಆರತಿ ಶುಕ್ಲಾ ಗುರುವಾರ ಭೇಟಿ ನೀಡಿದರು.
ಈ ವೇಳೆ ಮಾತನಾಡಿದ ಅವರು, ‘ಈ ಭಾಗದಲ್ಲಿ ಶೀಘ್ರವೇ ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ಆರಂಭವಾಗಲಿದೆ. ಈಗ ಉತ್ಪಾದನೆಯಾಗುತ್ತಿರುವುದಕ್ಕಿಂತಲೂ ಹೆಚ್ಚಿನ ಪ್ರಮಾಣದ ರೇಷ್ಮೆಗೂಡು ಉತ್ಪಾದನೆಯಾಗಬೇಕಿದೆ. ಈ ನಿಟ್ಟಿನಲ್ಲಿ ರೇಷ್ಮೆ ಬೆಳೆಯುವುದಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕು’ ಎಂದು ಹೇಳಿದರು.
ಈ ಭಾಗದಲ್ಲಿ ಹೆಚ್ಚು ಪ್ರಮಾಣದ ದಾಳಿಂಬೆ, ಹೂವು, ಹಣ್ಣು ತರಕಾರಿ ಬೆಳೆಯಲಾಗುತ್ತಿದೆ. ಇದರಿಂದಾಗಿ ಹಿಪ್ಪುನೇರಳೆ ಸೊಪ್ಪು ಬೆಳೆ ಮತ್ತು ರೇಷ್ಮೆಗೂಡು ಉತ್ಪಾದನೆ ಮೇಲೆ ವ್ಯತರಿಕ್ತ ಪರಿಣಾಮ ಬೀರುತ್ತಿದೆ. ವರ್ಷಗಳು ಕಳೆದಂತೆ ರೇಷ್ಮೆಗೂಡು ಉತ್ಪಾದನೆ ಪ್ರಮಾಣ ಕುಸಿಯುತ್ತಿದೆ ಎಂದು ಹೇಳಿದರು.
ದ್ವಿತಳಿ ರೇಷ್ಮೆಗೂಡು ಬೆಳೆಯುವ ಪ್ರಮಾಣ ಹೆಚ್ಚಿಸಲು ಸರ್ಕಾರ, ಇಲಾಖೆ ಜತೆಗೆ ರೈತ ಕಂಪನಿಗಳು ಕೂಡ ಶ್ರಮಿಸಬೇಕು ಎಂದು ಮನವಿ ಮಾಡಿದರು.
ಜೆ.ವೆಂಕಟಾಪುರಕ್ಕೆ ಭೇಟಿ ನೀಡಿದ್ದ ಅವರು ಅಲ್ಲಿ ರೇಷ್ಮೆನೂಲು ನೇಯ್ಗೆ ಚಟುವಟಿಕೆಗಳನ್ನು ವೀಕ್ಷಿಸಿ ನೇಯ್ಗೆಕಾರರ ಸಮಸ್ಯೆಗಳು, ಸರ್ಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಚರ್ಚಿಸಿದರು.
ನಬಾರ್ಡ್‌ನ ಹರ್ಷಿತ, ಮಂಡ್ಯದ ವಿಕಸನ ಸಂಸ್ಥೆ ಮುಖ್ಯ ಸಂಯೋಜಕ ಕೆಂಪಯ್ಯ, ಜ್ಯೋತಿ, ಲವಕಮಾರ್, ರೈತ ಕಂಪನಿ ಅಧ್ಯಕ್ಷ ಭಕ್ತರಹಳ್ಳಿ ಚಿದಾನಂದಮೂರ್ತಿ, ನಿರ್ದೇಶಕ ನಾಗಮಂಗಲ ತಮ್ಮಣ್ಣ, ಹೊಸಪೇಟೆ ಮಂಜುನಾಥ್ ಗೌಡ, ಕೆ.ಕುಮಾರ್, ಎಸ್.ಜಿ.ನಾರಾಯಣಸ್ವಾಮಿ, ಮುರಳಿ, ಕಂಪನಿ ಸಿಇಒ ಸುರೇಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.