ADVERTISEMENT

ಶಿಡ್ಲಘಟ್ಟ| ಪ್ರಾಯೋಗಿಕ ವ್ಯವಹಾರ ಜ್ಞಾನ ಅಗತ್ಯ: ಕೆ.ಎನ್. ರಾಮಾಂಜಿನಪ್ಪ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 6:15 IST
Last Updated 18 ಫೆಬ್ರುವರಿ 2026, 6:15 IST
ಶಿಡ್ಲಘಟ್ಟ ಮಳ್ಳೂರಿನ ಸ್ವಾಮಿ ವಿವೇಕಾನಂದ ಪದವಿ ಕಾಲೇಜಿನಲ್ಲಿ ಆಹಾರ ಮೇಳ ನಡೆಯಿತು
ಶಿಡ್ಲಘಟ್ಟ ಮಳ್ಳೂರಿನ ಸ್ವಾಮಿ ವಿವೇಕಾನಂದ ಪದವಿ ಕಾಲೇಜಿನಲ್ಲಿ ಆಹಾರ ಮೇಳ ನಡೆಯಿತು   

ಶಿಡ್ಲಘಟ್ಟ: ವ್ಯಾಪಾರ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಯಶಸ್ವಿಯಾಗಲು ಕೇವಲ ಪುಸ್ತಕದ ಓದಷ್ಟೇ ಸಾಲದು, ಪ್ರಾಯೋಗಿಕ ವ್ಯವಹಾರ ಜ್ಞಾನ ಅತ್ಯಗತ್ಯ ಎಂದು ಮಳ್ಳೂರು ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಅಧ್ಯಕ್ಷ ಕೆ.ಎನ್. ರಾಮಾಂಜಿನಪ್ಪ ಹೇಳಿದರು.

ತಾಲ್ಲೂಕಿನ ಮಳ್ಳೂರಿನ ಸ್ವಾಮಿ ವಿವೇಕಾನಂದ ಪದವಿ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಆಹಾರ ಮೇಳ ಉದ್ಘಾಟಿಸಿ ಮಾತನಾಡಿದರು.

ಹಣಕಾಸಿನ ಸಾಕ್ಷರತೆ, ಮಾರುಕಟ್ಟೆ ವಿಶ್ಲೇಷಣೆ, ತೆರಿಗೆ, ಕಾನೂನು ಮತ್ತು ಡಿಜಿಟಲ್ ಕೌಶಲಗಳನ್ನು ವಿದ್ಯಾರ್ಥಿಗಳಲ್ಲಿ ವೃದ್ಧಿಸುವ ಉದ್ದೇಶದಿಂದ ಕಾಲೇಜು ವಿದ್ಯಾರ್ಥಿಗಳಿಂದ ಆಹಾರ ಮೇಳ‌ ಆಯೋಜಿಸಿದ್ದೇವೆ ಎಂದರು.

ADVERTISEMENT

ಆಹಾರ ಮೇಳ ವಿದ್ಯಾರ್ಥಿಗಳಿಗೆ ಪಾಕ ಕಲೆ, ಪೌಷ್ಟಿಕಾಂಶ, ತಂಡದ ಕೆಲಸ ಮತ್ತು ಉದ್ಯಮಶೀಲತೆಯ ಪ್ರಾಯೋಗಿಕ ಜ್ಞಾನ ಒದಗಿಸುತ್ತವೆ. ವಿವಿಧ ಸಂಸ್ಕೃತಿಗಳ ಆಹಾರ ಪರಿಚಯ, ಆರೋಗ್ಯಕರ ಆಹಾರ ಪದ್ಧತಿ, ಸ್ವಚ್ಛತೆ, ಹಣಕಾಸಿನ ನಿರ್ವಹಣೆ, ಮತ್ತು ಸಂವಹನ ಕೌಶಲಗಳನ್ನು ವಿದ್ಯಾರ್ಥಿಗಳು ಕಲಿಯಬಹುದು ಎಂದರು.

ಆಹಾರ ಮೇಳದಲ್ಲಿ ವಿದ್ಯಾರ್ಥಿಗಳು ಸಾವಯವ ಪದಾರ್ಥಗಳಿಂದ ತಯಾರಿಸಿದ ತಿನಿಸುಗಳನ್ನು ಮಾರಾಟ ಮಾಡುವ ಮೂಲಕ ಗಮನ ಸೆಳೆದರು. ಪ್ರೌಢಶಾಲೆ, ಪ್ರಾಥಮಿಕ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು ಮೇಳದಲ್ಲಿ ತಿನಿಸುಗಳನ್ನು ಕೊಳ್ಳುವ ಮೂಲಕ ಮೇಳದ ಕಳೆ ಹೆಚ್ಚಿಸಿದ್ದರು.

ಸಿ.ನಾರಾಯಣಸ್ವಾಮಿ, ಕೆ. ಮುನಿರೆಡ್ಡಿ, ಸಿ.ಎಂ. ದೇವರಾಜು, ಸಿ.ಎಂ.ಸುರೇಶ್, ಕೆ. ಸುರೇಶ್, ವಿ. ವೆಂಕಟೇಶ್, ಎಂ. ಕೆ. ನವೀನ್ ಕುಮಾರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.