ADVERTISEMENT

ಶ್ರೀನಿವಾಸ ಸಾಗರ: ಪ್ರವಾಸಿಗರ ಅತಿರೇಕ!

ಕೋಡಿಯ ತಡೆಗೋಡೆ ಏರುವ ಯುವಕರು

​ಪ್ರಜಾವಾಣಿ ವಾರ್ತೆ
Published 22 ಮೇ 2022, 19:56 IST
Last Updated 22 ಮೇ 2022, 19:56 IST
ಶ್ರೀನಿವಾಸ ಸಾಗರ ಜಲಾಶಯದ ಕೋಡಿಯ ತಡೆಗೋಡೆ ಮೇಲೆ ಹತ್ತಿರುವ ಯುವಕ
ಶ್ರೀನಿವಾಸ ಸಾಗರ ಜಲಾಶಯದ ಕೋಡಿಯ ತಡೆಗೋಡೆ ಮೇಲೆ ಹತ್ತಿರುವ ಯುವಕ   

ಚಿಕ್ಕಬಳ್ಳಾಪುರ: ತಾಲ್ಲೂಕಿನಶ್ರೀನಿವಾಸ ಸಾಗರ ಜಲಾಶಯ ಈಗ ತುಂಬಿದೆ. ಕೋಡಿ ಹರಿಯುತ್ತಿದೆ. ಇಂತಹ ಸಂದರ್ಭದಲ್ಲಿ ಸಾಗರವು ಪ್ರವಾಸಿಗರು ಹಾಗೂ ಯುವ ಸಮುದಾಯಕ್ಕೆ ಆಕರ್ಷಣೆಯ ಕೇಂದ್ರವಾಗುತ್ತದೆ.

ನಿತ್ಯ ಅಪಾರ ಸಂಖ್ಯೆಯಲ್ಲಿ ಇಲ್ಲಿಗೆಜನರು ಭೇಟಿ ನೀಡುತ್ತಾರೆ. ಆದರೆ ನೀರಿನಲ್ಲಿ ಆಟಕ್ಕೆ ಬರುವವರ ‘ಹುಚ್ಚಾಟ’ಗಳು ಸಹ ಹೆಚ್ಚಿವೆ. ಶ್ರೀನಿವಾಸ ಸಾಗರದ ಕೋಡಿಯ ತಡೆಗೋಡೆಯ ಮೇಲೆ ಏರಲು ಯುವಕರು ತಾ ಮುಂದು ನಾ ಮುಂದು ಎಂದು ಮುಗಿ ಬೀಳುತ್ತಿದ್ದಾರೆ.

ಭಾನುವಾರ ಹೀಗೆ ತಡೆಗೋಡೆಯ ಮೇಲೆ ಹತ್ತಿದ ಯುವಕನೊಬ್ಬ ಏಕಾಏಕಿ ಬಿದ್ದಿದ್ದಾನೆ. ಆದರೆ ಯಾವುದೇ ಪ್ರಾಣಾಪಾಯ ಆಗಿಲ್ಲ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈತ ಗೌರಿಬಿದನೂರು ತಾಲ್ಲೂಕು ಮೂಲದವರು ಎನ್ನಲಾಗಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೀಗೆ ತಡೆಗೋಡೆಯ ಮೇಲೆ ಹತ್ತುವವರ ಸಂಖ್ಯೆ ನಿತ್ಯಹೆಚ್ಚುತ್ತಲೇ ಇದೆ.

ADVERTISEMENT

ಧುಮುಕುವ ನೀರಿನಲ್ಲಿನಾಲ್ಕಾರು ಯುವಕರು ಒಟ್ಟಿಗೆ ತಡೆಗೋಡೆಯನ್ನು ಹತ್ತುವುದು, ಪೈಪೋಟಿಗೆ ಬಿದ್ದಂತೆ ಮೇಲೆ ಏರುವುದು...ಇಂತಹ ದೃಶ್ಯಗಳು ಸಾಮಾನ್ಯ ಎನಿಸಿವೆ. ಕಡಿದಾದ ತಡೆಗೋಡೆಯಿಂದ ಸ್ವಲ್ಪ ಜಾರಿದರೂ ಕೆಳಕ್ಕೆ ಬೀಳಬೇಕಾಗುತ್ತದೆ.

‘ಇಲ್ಲಿ ಪೊಲೀಸರನ್ನು ನಿಯೋಜಿಸಿ ಭದ್ರತೆಯನ್ನು ಕಲ್ಪಿಸಬೇಕು. ನೀರಿನಲ್ಲಿ ಆಟವಾಡಲಿ. ಆದರೆ ಹೀಗೆ ಹುಚ್ಚಾಟಗಳು ಅನಗತ್ಯ’ ಎನ್ನುತ್ತಾರೆ ಪ್ರವಾಸಿಗರ ಚಿಕ್ಕಬಳ್ಳಾಪುರದ ರಮೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.