ADVERTISEMENT

ಬಾಗೇಪಲ್ಲಿ | ಪರೀಕ್ಷೆ ಭಯ ಬಿಡಿ, ಸತತ ಅಭ್ಯಾಸ ಮಾಡಿ: ಸುಬ್ರಮಣ್ಯಂ ವೆಂಕಟೇಶ್

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 5:54 IST
Last Updated 18 ಜನವರಿ 2026, 5:54 IST
ಬಾಗೇಪಲ್ಲಿ ತಾಲ್ಲೂಕಿನ ಘಂಟಂವಾರಿಪಲ್ಲಿ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಾಮಾಗ್ರಿ ವಿತರಿಸಲಾಯಿತು
ಬಾಗೇಪಲ್ಲಿ ತಾಲ್ಲೂಕಿನ ಘಂಟಂವಾರಿಪಲ್ಲಿ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಾಮಾಗ್ರಿ ವಿತರಿಸಲಾಯಿತು   

ಬಾಗೇಪಲ್ಲಿ: ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮುಂದಿನ ಬದುಕಿನ ಪ್ರಮುಖ ಘಟ್ಟ. ಪರೀಕ್ಷೆಯ ಅಂಕಗಳು ಉದ್ಯೋಗ ಸಿಗಲು ಅವಕಾಶ ಕಲ್ಪಿಸುತ್ತದೆ. ಸಮಯ ವ್ಯರ್ಥ ಮಾಡದೆ ಪಠ್ಯಪುಸ್ತಕ ಓದಬೇಕು. ಪರೀಕ್ಷೆಯಲ್ಲಿ ಎಲ್ಲ ಪ್ರಶ್ನೆಗೆ ಉತ್ತರ ಬರೆಯಲು ಸತತವಾಗಿ ಅಭ್ಯಾಸ ಮಾಡಬೇಕು ಎಂದು ಶಿಡ್ಲಘಟ್ಟದ ನಿವೃತ್ತ ಯೋಧ ಸುಬ್ರಮಣ್ಯಂ ವೆಂಕಟೇಶ್ ಹೇಳಿದರು.

ತಾಲ್ಲೂಕಿನ ಘಂಟಂವಾರಿಪಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ಪರೀಕ್ಷಾ ಪರಿಕರ ವಿತರಿಸಿ ಮಾತನಾಡಿದರು.

ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಜಿ.ರಾಮಸುಬ್ಬಮ್ಮ ಮಾತನಾಡಿ, ದೇಶಸೇವೆ ಮಾಡಲು ಕೆಲವರಿಗೆ ಸಿಗುತ್ತದೆ. ದೇಶಸೇವೆ ಮಾಡಿದ ಎಸ್‍ವಿ.ಅಯ್ಯರ್‌ ಅವರಂತೆ ಆಗಬೇಕು. ಚಳಿ, ಗಾಳಿ, ಬಿಸಿಲು ಎನ್ನದೇ ಹಗಲು, ರಾತ್ರಿ ಗಡಿಯಲ್ಲಿ ದೇಶ ಕಾಯುವ ಯೋಧರ ಕೆಲಸ ಸ್ಮರಣೀಯ ಆಗಿದೆ. ವಿದ್ಯಾರ್ಥಿಗಳಿಗೆ ವಿತರಿಸಿದ ಪರೀಕ್ಷಾ ಸಾಮಾಗ್ರಿಗಳನ್ನು ಬಳಕೆ ಮಾಡಿ ಉತ್ತಮ ಅಂಕ ಪಡೆಯಬೇಕು ಎಂದರು.

ADVERTISEMENT

ರಮೇಶ್, ಶಿವಲಕ್ಷ್ಮಿ, ಬಾಲಕೃಷ್ಣ, ಶಿಕ್ಷಕ ಜಿ.ವಿ.ಚಂದ್ರಶೇಖರ್, ಕೆ.ಬಿ.ಆಂಜನೇಯರೆಡ್ಡಿ, ನಾರಾಯಣಸ್ವಾಮಿ, ಎನ್.ಎನ್.ಸಂದ್ಯಾ, ಜಿ.ಲಕ್ಷ್ಮಿದೇವಮ್ಮ, ಶರ್ಮಿಲಾ, ಎಚ್.ಆರ್.ರಘುನಾಥ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.