ADVERTISEMENT

ವಿಶ್ವ ಜೀವವೈವಿದ್ಯ ದಿನ | ಗಾಯಗೊಂಡ ಬಾವಲಿ ಆರೈಕೆ

​ಪ್ರಜಾವಾಣಿ ವಾರ್ತೆ
Published 22 ಮೇ 2020, 11:04 IST
Last Updated 22 ಮೇ 2020, 11:04 IST
ಬಾವಲಿಗೆ ಮಾವಿನ ಹಣ್ಣು ತಿನ್ನಿಸುತ್ತಿರುವ ಸ್ನೇಕ್ ನಾಗರಾಜ್
ಬಾವಲಿಗೆ ಮಾವಿನ ಹಣ್ಣು ತಿನ್ನಿಸುತ್ತಿರುವ ಸ್ನೇಕ್ ನಾಗರಾಜ್   

ಶಿಡ್ಲಘಟ್ಟ: ತಾಲ್ಲೂಕಿನ ಕೊತ್ತನೂರಿನ ಸ್ನೇಕ್ ನಾಗರಾಜ್ ಗಾಯಗೊಂಡ ಬಾವಲಿಯನ್ನು ಆರೈಕೆ ಮಾಡುತ್ತಾ ವಿಶ್ವ ಜೀವವೈವಿದ್ಯ ದಿನವನ್ನು (ಶುಕ್ರವಾರ) ಆಚರಿಸಿದರು.

ಕೊತ್ತನೂರಿನ ಕೆ.ಪಿ.ದೇವರಾಜ್ ಅವರ ತೋಟದಲ್ಲಿ ವಿದ್ಯುತ್ ತಂತಿಗೆ ಸಿಲುಕಿ ರೆಕ್ಕೆಯ ಮೂಳೆ ಮುರಿದು ಬಿದ್ದಿದ್ದ ಬಾವಲಿಯನ್ನು ಸ್ನೇಕ್ ನಾಗರಾಜ್ ಮುಲಾಮು ಹಚ್ಚಿ ಆರೈಕೆ ಮಾಡುತ್ತಿದ್ದಾರೆ. ಮಾವು, ದ್ರಾಕ್ಷಿ ಮುಂತಾದ ಹಣ್ಣುಗಳನ್ನು ನೀಡುತ್ತಿರುವುದರಿಂದ ಬಾವಲಿ ಕೊಂಚ ಚೇತರಿಸಿಕೊಂಡಿದೆ.

‘ದೊಡ್ಡ ಗಾತ್ರದ ಬಾವಲಿಗಳು ಪರಾಗ ಸ್ಪರ್ಶ ಹಾಗೂ ಬೀಜ ವಿಸ್ತರಣೆಯನ್ನೂ ಮಾಡಿ, ಕಾಡನ್ನು ಬೆಳೆಯಲು ಸಹಾಯ ಮಾಡುತ್ತವೆ. ಕೀಟಗಳನ್ನು ತಿನ್ನುವುದರಿಂದ ರೈತ ಮಿತ್ರನಾಗಿ ಬೆಳೆ ಹಾನಿ ನಿಯಂತ್ರಿಸುತ್ತವೆ. ಸೊಳ್ಳೆಗಳನ್ನು ತಿನ್ನುವುದರಿಂದ ಮಲೇರಿಯಾ, ಡೆಂಗಿಯಂತಹ ಕಾಯಿಲೆ ತಡೆಗಟ್ಟುತ್ತವೆ. ದ್ರಾಕ್ಷಿ ಬಲೆಗೆ ಸಿಕ್ಕಿ ಹಲವಾರು ಬಾವಲಿಗಳನ್ನು ರಕ್ಷಿಸಿದ್ದೇನೆ’ ಎಂದು ಸ್ನೇಕ್ ನಾಗರಾಜ್ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.