ಸಾವು
ಪ್ರಾತಿನಿಧಿಕ ಚಿತ್ರ
ಚಿಂತಾಮಣಿ: ತಾಲ್ಲೂಕಿನ ನಂದಿಗಾನಹಳ್ಳಿ ಬಳಿ ಭಾನುವಾರ ಆಟವಾಡಲು ಹೋಗಿದ್ದ ವಿದ್ಯಾರ್ಥಿ ಆಕಸ್ಮಿಕವಾಗಿ ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದಾನೆ.
ನಂದಿಗಾನಹಳ್ಳಿ ಗ್ರಾಮದ ರವಿ ಎಂಬುವವರ ಪುತ್ರ ರಂಜಿತ್ (15) ಮೃತಪಟ್ಟಿರುವ ವಿದ್ಯಾರ್ಥಿ.
ಮುರುಗಮಲ್ಲ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ಕಲಿಯುತ್ತಿದ್ದನು. ಭಾನುವಾರ ನಾಲ್ವರು ವಿದ್ಯಾರ್ಥಿಗಳು ಆಟವಾಡಲು ಹೋಗಿದ್ದರು. ಗ್ರಾಮದ ಸಮೀಪವೇ ಇರುವ ಕೃಷಿ ಹೊಂಡದ ಬಳಿ ಆಟವಾಡುತ್ತಿದ್ದಾಗ ರಂಜಿತ್ ಕಾಲುಜಾರಿ ಹೊಂಡಕ್ಕೆ ಬಿದ್ದಿದ್ದಾನೆ.
ಉಳಿದ ಮೂವರು ವಿದ್ಯಾರ್ಥಿಗಳು ಗ್ರಾಮದ ಮಂಜುನಾಥರೆಡ್ಡಿ ಎಂಬುವರಿಗೆ ರಂಜಿತ್ ಕೃಷಿ ಹೊಂಡಕ್ಕೆ ಬಿದ್ದಿರುವುದನ್ನು ತಿಳಿಸಿದ್ದಾರೆ. ಮಂಜುನಾಥರೆಡ್ಡಿ ಮತ್ತಿತರರು ಸ್ಥಳಕ್ಕೆ ತೆರಳಿ ರಂಜಿತ್‌ನನ್ನು ಹೊರತೆಗೆಯುವ ವೇಳೆಗೆ ಮೃತಪಟ್ಟಿದ್ದನು.
ಮೃತ ವಿದ್ಯಾರ್ಥಿಯ ತಂದೆ ನೀಡಿರುವ ದೂರಿನ ಮೇರೆಗೆ ಕೆಂಚಾರ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್ಐ ಶಿವಕುಮಾರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.