ಚಿಂತಾಮಣಿ: ಹೈದರಾಬಾದ್‌ನಿಂದ ಬಂದಿದ್ದ ಲಾರಿ ಚಾಲಕನಿಗೆ ಕ್ವಾರಂಟೈನ್‌ಗೆ ಒಳಗಾಗಲು ಹೇಳಿದ್ದ ಆಶಾ ಕಾರ್ಯಕರ್ತೆಯ ಮೇಲೆ ಚಾಲಕನ ಸಂಬಂಧಿಕರು ಇಟ್ಟಿಗೆಯಿಂದ ಹಲ್ಲೆ ನಡೆಸಿರುವ ಘಟನೆ ತಾಲ್ಲೂಕಿನ ಐಮರೆಡ್ಡಿಹಳ್ಳಿಯಲ್ಲಿ ನಡೆದಿದೆ. ಚಾಲಕ ತಲೆಮರೆಸಿಕೊಂಡಿದ್ದು, ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾರಿ ಚಾಲಕ ನಾಗರಾಜ್ ಅವರಿಗೆ ಕೊರೊನಾ ತಪಾಸಣೆಗೆ ಒಳಗಾಗಲು ಆಶಾ ಕಾರ್ಯಕರ್ತೆ ವೆಂಕಟಲಕ್ಷ್ಮಮ್ಮ ತಿಂಗಳ ಹಿಂದೆ ತಿಳಿಹೇಳಿದ್ದರು. ಆಗ ನಾಗರಾಜ್ ಹೈದರಾಬಾದ್‌ಗೆ ವಾಪಸ್ ಆಗಿದ್ದರು. ಈಚೆಗೆ ಮತ್ತೆ ಗ್ರಾಮಕ್ಕೆ ಮರಳಿದ್ದರು. ಆಶಾ ಕಾರ್ಯಕರ್ತೆ ಮತ್ತೆ ತಪಾಸಣೆಗೆ ಸಲಹೆ ಮಾಡಿದ್ದರು. ಸಿಟ್ಟಿಗೆದ್ದ ನಾಗರಾಜ್, ಹಾಗೂ ಸಂಬಂಧಿಗಳು ಕಾರ್ಯಕರ್ತೆ ಮೇಲೆ ಇಟ್ಟಿಗೆಯಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.