ADVERTISEMENT

ನೆಮ್ಮದಿ ಕಸಿದ ಬದುಕಿನ ಶೈಲಿ: ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಓಬಳಪ್ಪ

ಸಾದಲಿ: ಎಸ್.ದೇವಗಾನಹಳ್ಳಿ ಅಂಬಾ ಕನಕದುರ್ಗಾ ದೇವಿಗೆ ಕ್ಷೀರಾಭಿಷೇಕ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2020, 13:39 IST
Last Updated 16 ಮಾರ್ಚ್ 2020, 13:39 IST
ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಿದರು
ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಿದರು   

ಸಾದಲಿ: ಬದಲಾದ ನಮ್ಮ ಬದುಕಿನ ಶೈಲಿಯಿಂದಾಗಿ ನೆಮ್ಮದಿಯಿಲ್ಲ ಇಲ್ಲವಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಓಬಳಪ್ಪ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಸಾದಲಿ ಹೋಬಳಿಯ ಎಸ್.ದೇವಗಾನಹಳ್ಳಿ ಅಂಬಾ ಕನಕದುರ್ಗಾ ದೇವಿಗೆ ಹೋಳಿ ಹಬ್ಬದ ಅಂಗವಾಗಿ 101 ಲೀಟರ್ ಕ್ಷೀರಾಭಿಷೇಕ ಹಾಗೂ ಮುತ್ತಿನ ಪಲ್ಲಕ್ಕಿ ಉತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯುವ ಜನರು ಹಿರಿಯರು ಕಿರಿಯರು ಗುರುಗಳು ಹೆತ್ತವರಿಗೆ ಕೊಡಬೇಕಾದ ಗೌರವವನ್ನು ಕೊಡದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ನಮ್ಮ ಯುವ ಜನರು ರೀತಿ ಹಾದಿಯಲ್ಲಿ ಸಾಗುತ್ತಿದ್ದಾರೆ ಎನ್ನುವ ಆತಂಕ ಮನೆ ಮಾಡಿದೆ ಎಂದರು.

ADVERTISEMENT

ನಮ್ಮ ಮಕ್ಕಳನ್ನು ಉತ್ತಮ ದಾರಿಯಲ್ಲಿ ನಡೆಸುವಲ್ಲಿ ಸಂಸ್ಕಾರವನ್ನು ಕಲಿಸಲು ನಾವು ಎಡವುತ್ತಿದ್ದೇವೆ. ಮೊದಲು ನಮ್ಮ ನಡವಳಿಕೆಗಳನ್ನು ಸರಿಪಡಿಸಿಕೊಂಡು. ನಂತರ ನಮ್ಮ ಮುಂದಿನ ಪೀಳಿಗೆಯನ್ನು ಸರಿದಾರಿಯಲ್ಲಿ ಮುನ್ನಡೆಸಬೇಕಿದೆ ಎಂದು ಹೇಳಿದರು

ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ನಮ್ಮ ಬದುಕಿನ ಅಂಗವಾಗಬೇಕು. ಧಾರ್ಮಿಕ ಕಾರ್ಯಗಳು ನಮ್ಮಲ್ಲಿ ಸಾಮರಸ್ಯ ಮೂಡಿಸಿ ಬದುಕಿನ ಜಂಜಾಟದಿಂದ ನೆಮ್ಮದಿ ದರ್ಶನ ನೀಡುತ್ತವೆ. ಸಂಸ್ಕೃತಿ ಚಟುವಟಿಕೆಗಳು ಆಚಾರ ವಿಚಾರ ಸಂಪ್ರದಾಯವನ್ನು ಮುಂದಿನ ಪೀಳಿಗೆಗೂ ಮುಂದುವರಿತ್ತವೆ ಎಂದು ತಿಳಿಸಿದರು.

ಚಿಕ್ಕಬಳ್ಳಾಪುರ ಸ್ಕೂಲ್ ಆಫ್ ಡ್ಯಾನ್ಸ್ ತಂಡದಿಂದ ಭರತನಾಟ್ಯ ನೃತ್ಯ ಪ್ರದರ್ಶನ ಇತ್ತು. ದೇವಿಯ ಮುತ್ತಿನ ಪಲ್ಲಕ್ಕಿ ಉತ್ಸವ ರಾತ್ರಿ ನಡೆಯಿತು.

ಗ್ರಾ.ಪಂ. ಅಧ್ಯಕ್ಷ ಟಿ.ಕೃಷ್ಣಪ್ಪ, ರಾಮದಾಸು, ಜಿ.ವಿ.ತಿಮ್ಮರಾಜು, ಡಿ.ವಿ.ಪ್ರಸಾದ್, ಎಂ ಶಿವಪ್ಪ, ಡಿ.ಎನ್.ರಾಮಚಂದ್ರಪ್ಪ, ವಿಜಯ್ ಕುಮಾರ್, ಡಿ.ಜಿ.ರಾಘವೇಂದ್ರರಾವ್, ವೇಣುಗೋಪಾಲ್, ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.