ADVERTISEMENT

ಚಿಂತಾಮಣಿ: ಅನಧಿಕೃತ ಕ್ಲಿನಿಕ್‌ಗೆ ಬೀಗ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 4:46 IST
Last Updated 10 ಫೆಬ್ರುವರಿ 2026, 4:46 IST
ಚಿಂತಾಮಣಿ ತಾಲ್ಲೂಕಿನ ಕೋರ್ಲಪರ್ತಿ ಗ್ರಾಮದಲ್ಲಿ ಅನಧಿಕೃತ ನಡೆಯುತ್ತಿದ್ದ ಕ್ಲಿನಿಕ್‌ಗೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಾಮಚಂದ್ರಾರೆಡ್ಡಿ ನೇತೃತ್ವದ ತಂಡ ಬೀಗ ಜಡಿದಿದೆ
ಚಿಂತಾಮಣಿ ತಾಲ್ಲೂಕಿನ ಕೋರ್ಲಪರ್ತಿ ಗ್ರಾಮದಲ್ಲಿ ಅನಧಿಕೃತ ನಡೆಯುತ್ತಿದ್ದ ಕ್ಲಿನಿಕ್‌ಗೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಾಮಚಂದ್ರಾರೆಡ್ಡಿ ನೇತೃತ್ವದ ತಂಡ ಬೀಗ ಜಡಿದಿದೆ   

ಚಿಂತಾಮಣಿ: ತಾಲ್ಲೂಕಿನ ಕೋರ್ಲಪರ್ತಿ ಗ್ರಾಮದಲ್ಲಿ ಅನಧಿಕೃತವಾಗಿ ನಡೆಯುತ್ತಿದ್ದ ಕ್ಲಿನಿಕ್‌ಗೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಾಮಚಂದ್ರಾರೆಡ್ಡಿ ನೇತೃತ್ವದ ತಂಡ ಭೇಟಿ ನೀಡಿ ಸೋಮವಾರ ಬೀಗ ಜಡಿಯಲಾಗಿದೆ.

ಡಾ.ಶ್ರೀರಾಮ ರೆಡ್ಡಿ ಅವರ ವಿದ್ಯಾಭ್ಯಾಸದ ದಾಖಲಾತಿ ಪರಿಶೀಲಿಸಿದಾಗ ಅವರ ಬಳಿ ಯಾವುದೇ ದಾಖಲೆ ಹಾಗೂ ಪರವಾನಗಿ ಇಲ್ಲ. ಹಾಗಾಗಿ ಕೆಪಿಎಂಇ ಕಾಯ್ದೆ ಅಡಿಯಲ್ಲಿ ಜಿಲ್ಲಾಧಿಕಾರಿಗಳ ನ್ಯಾಯಾಲಯಕ್ಕೆ ಪ್ರಾಥಮಿಕ ವರದಿ ಮಾಡಿ, ಕ್ಲಿನಿಕ್ ಬಂದ್ ಮಾಡಿರುವ ಬಗ್ಗೆ ತಿಳಿಸಲಾಗಿದೆ.

ಶ್ರೀರಾಮ ರೆಡ್ಡಿ ಈ ಮೊದಲು ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿಯಲ್ಲಿ ಕ್ಲಿನಿಕ್ ನಡೆಸುತ್ತಿದ್ದದರು. ಅಲ್ಲಿನ ತಾಲ್ಲೂಕು ಆರೋಗ್ಯಾಧಿಕಾರಿ ಶಿಸ್ತಿನ ಕ್ರಮಕ್ಕೆ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಎಫ್ಐಆರ್ ಆಗಿದ್ದು, ₹ 25 ಸಾವಿರ ದಂಡ ವಿಧಿಸಲಾಗಿತ್ತು. ಆದರೆ, ಶ್ರೀರಾಮ ರೆಡ್ಡಿ ಯಾವುದೇ ದಂಡ ಪಾವತಿಸದೆ, ಮತ್ತೆ ಕೋರ್ಲಪರ್ತಿ ಗ್ರಾಮದಲ್ಲಿ ಕ್ಲಿನಿಕ್ ನಡೆಸುತ್ತಿದ್ದರು. ಹಾಗಾಗಿ ಅವರ ವಿರುದ್ಧ ಶಿಸ್ತಿನ ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳ ನ್ಯಾಯಾಲಯಕ್ಕೆ ಎಫ್ಐಆರ್ ಮಾಡಲಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರಾಮಚಂದ್ರಾರೆಡ್ಡಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.