ADVERTISEMENT

ಗ್ರಾಮೀಣ ಜನರಿಗೆ 'ಯುವಿ ಸಾನಿಟೈಸರ್' ವಿತರಣೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2020, 2:27 IST
Last Updated 10 ಸೆಪ್ಟೆಂಬರ್ 2020, 2:27 IST
ಸಿಎಂಆರ್ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸಾರ್ವಜನಿಕರಿಗೆ 'ಯುವಿ ಸಾನಿಟೈಸರ್ ಕಿಟ್' ವಿತರಿಸಿದರು.
ಸಿಎಂಆರ್ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸಾರ್ವಜನಿಕರಿಗೆ 'ಯುವಿ ಸಾನಿಟೈಸರ್ ಕಿಟ್' ವಿತರಿಸಿದರು.   

ಬೆಂಳೂರು: ನಗರದ ಸಿಎಂಆರ್ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ತಂಡವು ಕೊರೊನಾ ವೈರಸ್ ಶಮನಗೊಳಿಸುವ 'ಯುವಿ ಸಾನಿಟೈಸರ್' ಅನ್ನು ಅಭಿವೃದ್ಧಿ ಪಡಿಸಿದೆ.

ಕೇಂದ್ರ ಸರ್ಕಾರದ 'ಉನ್ನತ ಭಾರತ ಅಭಿಯಾನ'ದ ಅಂಗವಾಗಿ ಈ ಸಾಧನ ಅಭಿವೃದ್ಧಿಪಡಿಸಲಾಗಿದೆ.

ಕೊರೊನಾ ತಡೆಗಟ್ಟುವ ಹಾಗೂ ಜನರಲ್ಲಿ ಸುರಕ್ಷತಾ ಅರಿವು ಮೂಡಿಸುವ ಸಲುವಾಗಿ 'ಹಳ್ಳಿಗಳ ಕಡೆಗೆ ನಮ್ಮ ನಡಿಗೆ' ಹೆಸರಿನಲ್ಲಿ ಗ್ರಾಮೀಣ ಭಾಗದ ಜನರಿಗೆ ಈ ಸ್ಯಾನಿಟೈಸರ್ ಬಾಕ್ಸ್ ಗಳನ್ನು ಉಚಿತವಾಗಿ ವಿತರಿಸುತ್ತಿದೆ.

ADVERTISEMENT

ಸಿಎಂಆರ್ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಸಂಜಯ್ ಜೈನ್, 'ಚಿಕ್ಕಬಳ್ಳಾಪುರ ಜಿಲ್ಲೆಯ ಚನ್ನಸಂದ್ರ, ಉಪ್ಪಾರಪೇಟೆ, ಕುರುಬೂರು ಮತ್ತು ದೊಡ್ಡ ಗಾಜನೂರು ಗ್ರಾಮಗಳಲ್ಲಿ 100ಕ್ಕೂ ಹೆಚ್ಚು 'ಯುವಿ ಸ್ಯಾನಿಟೈಸರ್' ಕಿಟ್‍ಗಳನ್ನು ವಿತರಿಸಲಾಗಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.