ADVERTISEMENT

ಅವಿರೋಧ ಆಯ್ಕೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2020, 6:46 IST
Last Updated 12 ನವೆಂಬರ್ 2020, 6:46 IST
ಚಿಂತಾಮಣಿ ತಾಲ್ಲೂಕಿನ ಬೊಮ್ಮೇಪಲ್ಲಿ ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ ಆಯ್ಕೆಯಾಗಿರುವ ಅಧ್ಯಕ್ಷ ಕೆ.ಎಸ್. ವೆಂಕಟರೆಡ್ಡಿ ಮತ್ತು ಉಪಾಧ್ಯಕ್ಷೆ ಬೈಯಮ್ಮ ಅವರನ್ನು ನಿರ್ದೇಶಕರು ಅಭಿನಂದಿಸಿದರು
ಚಿಂತಾಮಣಿ ತಾಲ್ಲೂಕಿನ ಬೊಮ್ಮೇಪಲ್ಲಿ ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ ಆಯ್ಕೆಯಾಗಿರುವ ಅಧ್ಯಕ್ಷ ಕೆ.ಎಸ್. ವೆಂಕಟರೆಡ್ಡಿ ಮತ್ತು ಉಪಾಧ್ಯಕ್ಷೆ ಬೈಯಮ್ಮ ಅವರನ್ನು ನಿರ್ದೇಶಕರು ಅಭಿನಂದಿಸಿದರು   

ಚಿಂತಾಮಣಿ: ತಾಲ್ಲೂಕಿನ ಬೊಮ್ಮೇಪಲ್ಲಿ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ.ಎಸ್. ವೆಂಕಟರೆಡ್ಡಿ ಮತ್ತುಉಪಾಧ್ಯಕ್ಷರಾಗಿ ಬೈಯಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಗ್ರಾಮದ ವಿಎಸ್ಎಸ್ಎನ್ ಕಚೇರಿಯಲ್ಲಿ ಬುಧವಾರ ಚುನಾವಣೆ ನಡೆಯಿತು. ಈ ಇಬ್ಬರು ಮಾತ್ರವೇ ನಾಮಪತ್ರ ಸಲ್ಲಿಸಿದ್ದರು. ಹಾಗಾಗಿ,ಚುನಾವಣಾಧಿಕಾರಿ ನಳಿನಿ ಅವಿರೋಧ ಆಯ್ಕೆಯನ್ನು ಘೋಷಿಸಿದರು.

ಅಧ್ಯಕ್ಷ ವೆಂಕಟರೆಡ್ಡಿ ಮಾತನಾಡಿ, ಸಂಘದ ವ್ಯಾಪ್ತಿಯ ಎಲ್ಲ ಗ್ರಾಮದ ರೈತರಿಗೆ ವ್ಯವಸಾಯಕ್ಕೆ ಸಂಬಂಧಿಸಿದ ಉಪಕರಣಗಳು, ರಸಗೊಬ್ಬರ, ಕೀಟನಾಶಕ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸಲು ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ADVERTISEMENT

ರೈತರು, ಸ್ತ್ರೀಶಕ್ತಿ ಸಂಘ, ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯ, ಸಬ್ಸಿಡಿ ಒದಗಿಸಲಾಗುವುದು. ಮಾದರಿ ಸಂಘವನ್ನಾಗಿ ರೂಪಿಸಲಾಗುವುದು. ಎಲ್ಲ ನಿರ್ದೇಶಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ನಿರ್ದೇಶಕರಾದ ಜಿ. ವಿಜಯಭಾಸ್ಕರ ರೆಡ್ಡಿ, ಪಿ.ಎಸ್. ಪಾಂಡುರಂಗರೆಡ್ಡಿ, ಬಿ. ನಾರಾಯಣಸ್ವಾಮಿ, ಬಿ.ಎಸ್. ಕೃಷ್ಣಪ್ಪ, ರಾಜ್‌ಕುಮಾರ್, ಲಕ್ಷ್ಮೀದೇವಮ್ಮ, ವೆಂಕಟೇಶಪ್ಪ, ಸುಬ್ಬಮ್ಮ, ಸಿ.ಎನ್. ಆಂಜನೇಯರೆಡ್ಡಿ, ಬಿ.ವಿ. ಮಾಧವಿ, ಮುಖಂಡರಾದ ಶ್ರೀನಾಥರೆಡ್ಡಿ, ಚೌಡಪ್ಪ, ಸಿ. ನಾರಾಯಣರೆಡ್ಡಿ, ವ್ಯವಸ್ಥಾಪಕ ಬೈರೆಡ್ಡಿ, ಸಿಬ್ಬಂದಿಯಾದ ಚೌಡರೆಡ್ಡಿ, ಬೊಮ್ಮೇಪಲ್ಲಿ ಶ್ರೀನಾಥರೆಡ್ಡಿ, ಗುಂಡ್ಲಹಳ್ಳಿ ಶ್ರೀನಾಥ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.