ಬಾಗೇಪಲ್ಲಿ: ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ರಸ್ತೆ 44ರ ಟೋಲ್ ಫ್ಲಾಜಾದಲ್ಲಿ ಶುಕ್ರವಾರ ಕಾರಿನ ಮೂಲಕ ಬಂದ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್.ಜಗನ್‍ಮೋಹನ್ ರೆಡ್ಡಿ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು.
ಟೋಲ್ ಫ್ಲಾಜಾ ಮೂಲಕ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅವರು ಪ್ರಯಾಣ ಬೆಳೆಸಿದ್ದರು. ಜಗನ್‌ಮೋಹನರೆಡ್ಡಿ ಅಭಿಯಾನಗಳತ್ತ ಕೈಮುಗಿದು ನಮಸ್ಕರಿಸಿದರು. ಹೂಮಾಲೆ, ಹಸ್ತಲಾಘವ ನೀಡಲು ಮುಂದಾದಾಗ ಕೆಲಕಾಲ ನೂಕುನುಗ್ಗಲು ಉಂಟಾಯಿತು. ಆಂಧ್ರಪ್ರದೇಶದ ಹಾಗೂ ರಾಜ್ಯದ ಪೊಲೀಸರು ಸ್ಥಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.