ADVERTISEMENT

ಎತ್ತಿನಹೊಳೆ: 2027ರ ಅಂತ್ಯಕ್ಕೆ ನೀರು ಬರದಿದ್ದರೆ ಹೋರಾಟ–ಪ್ರದೀಪ್ ಈಶ್ವರ್ ಹೇಳಿಕೆ

ಚಿಕ್ಕಬಳ್ಳಾಪುರಕ್ಕೆ ಎತ್ತಿನಹೊಳೆ ನೀರು; ಶಾಸಕ ಪ್ರದೀಪ್ ಈಶ್ವರ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 21:39 IST
Last Updated 22 ಡಿಸೆಂಬರ್ 2025, 21:39 IST
ಪ್ರದೀಪ್ ಈಶ್ವರ್
ಪ್ರದೀಪ್ ಈಶ್ವರ್   

ಚಿಕ್ಕಬಳ್ಳಾಪುರ: ‘ಎತ್ತಿನಹೊಳೆ ಯೋಜನೆಯ ನೀರು 2027ರ ಡಿಸೆಂಬರ್ ಅಂತ್ಯಕ್ಕೆ ಚಿಕ್ಕಬಳ್ಳಾಪುರಕ್ಕೆ ಬರಲಿದೆ. ಇಲ್ಲದಿದ್ದರೆ ನಾನೂ ನೀರಾವರಿ ಹೋರಾಟಗಾರರ ಜೊತೆ ಹೋರಾಟ ನಡೆಸುವೆ’ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎತ್ತಿನಹೊಳೆ ನೀರಾವರಿ ವಿಚಾರವಾಗಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ. 2027ರ ಡಿಸೆಂಬರ್ ಅಂತ್ಯಕ್ಕೆ ಚಿಕ್ಕಬಳ್ಳಾಪುರಕ್ಕೆ ನೀರು ಹರಿಸಬೇಕು ಎನ್ನುವ ಬೇಡಿಕೆ ಇದೆ ಎಂದರು.

ಎತ್ತಿನಹೊಳೆ ಯೋಜನೆಯ ನೀರು ಈ ಅವಧಿಯ ಒಳಗೆ ಚಿಕ್ಕಬಳ್ಳಾಪುರಕ್ಕೆ ಬರಲಿದೆ. ನೀರಾವರಿ ಹೋರಾಟಗಾರ ಬಗ್ಗೆ ಗೌರವವಿದೆ. ಈ ಅವಧಿಯಲ್ಲಿ ನೀರು ಚಿಕ್ಕಬಳ್ಳಾಪುರಕ್ಕೆ ಬರದಿದ್ದರೆ ನೀರಾವರಿ ಹೋರಾಟಗಾರರ ಜೊತೆ ನಾನೂ ಸೇರಿ ಹೋರಾಟ ಮಾಡುವೆ. ಅಲ್ಲಿಯವರೆಗೂ ಕಾಯೋಣ ಎಂದು ಹೇಳಿದರು.

ADVERTISEMENT

ಜಕ್ಕಲಮಡಗು ಜಲಾಶಯ ಎತ್ತರಿಸಬೇಕಿದೆ. ಇದರಿಂದ ಸುತ್ತಮುತ್ತಲ ಹಳ್ಳಿಗಳಿಗೆ ಸಮಸ್ಯೆ ಆಗುತ್ತದೆ. ಆದರೆ ಚಿಕ್ಕಬಳ್ಳಾಪುರ ನಗರ ಬೆಳೆಯುತ್ತಿದೆ. ನಗರದ ನಾಗರಿಕರಿಗೆ ನೀರು ಕೊಡಬೇಕು. ಭವಿಷ್ಯದ ಜನಸಂಖ್ಯೆ ಮತ್ತು ನಗರದ ಬೆಳವಣಿಗೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಈ ಕೆಲಸ ಮಾಡಲಾಗುವುದು ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.