ಶಿಡ್ಲಘಟ್ಟ: ಪ್ರಾಚೀನ ಭಾರತೀಯ ಆರೋಗ್ಯ ಮತ್ತು ಮೂಲ ಜೀವನಪದ್ಧತಿ ರೂಪದಲ್ಲಿ ಯೋಗ ಇಂದಿಗೂ ಬಳಕೆಯಾಗುತ್ತಿದೆ. ವಿಶ್ಪದಾದ್ಯಂತ ಬಹುತೇಕ ರಾಷ್ಟ್ರಗಳು ಜೀವನ ಶೈಲಿಯ ರೂಪದಲ್ಲಿ ಯೋಗವನ್ನು ಪರಿವರ್ತಿಸಿಕೊಂಡಿರುವುದು ಭಾರತದ ಹೆಮ್ಮೆ ಎಂದು ಮುಖ್ಯಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಹೇಳಿದರು.
ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಜಿಗಣಿಯ ಪ್ರಶಾಂತಿ ಕುಟೀರಂನ ಎಸ್-ವ್ಯಾಸ ಡೀಮ್ಡ್ ಯೂನಿವರ್ಸಿಟಿಯ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಯೋಗದಿನಾಚರಣೆ, ಲೇಖನ ಸಾಮಗ್ರಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತೀಯ ಮೂಲದ ಯೋಗಾಭ್ಯಾಸಕ್ಕೆ ವಿಶ್ವ ಮನ್ನಣೆ ಸಿಕ್ಕಿದೆ. ಇಡೀ ಜಗತ್ತಿನ ಸುಮಾರು 200ಕ್ಕೂ ಹೆಚ್ಚು ರಾಷ್ಟ್ರಗಳು ಯೋಗವನ್ನು ಒಪ್ಪಿಕೊಂಡು ಭಾರತಕ್ಕೆ ಯೋಗದ ಮೂಲಕ ನಮಿಸಿವೆ ಎಂದರು.
ಎಸ್-ವ್ಯಾಸ ಡೀಮ್ಡ್ ಯೂನಿವರ್ಸಿಟಿಯ ನ್ಯಾಚುರೋಪತಿ ವಿಭಾಗದ ಎಸ್.ಕೃತ್ತಿಕಾ ಮಾತನಾಡಿ, ಯುವಪೀಳಿಗೆ ದೃಶ್ಯಮಾಧ್ಯಮಗಳಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳಬೇಕು. ದೇಹಾರೋಗ್ಯದ ದೃಷ್ಟಿಯಿಂದ ಯೋಗಾಭ್ಯಾಸಕ್ಕೆ ಒತ್ತುಕೊಡಬೇಕು ಎಂದರು.
ವಿದ್ಯಾರ್ಥಿಗಳಿಂದ ಯೋಗಪ್ರದರ್ಶನ ನಡೆಯಿತು. ವಿದ್ಯಾರ್ಥಿಗಳಿಗೆ ವೈಯಕ್ತಿಕ ಸ್ವಚ್ಛತೆಗಾಗಿ ಕಿಟ್, ಪುಸ್ತಕ, ಲೇಖನ ಸಾಮಗ್ರಿ ವಿತರಿಸಲಾಯಿತು. ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವೆಂಕಟೇಶ್, ಎ.ಬಿ.ನಾಗರಾಜ, ಬಿ.ನಾಗರಾಜು, ಮಧು, ತಾಜೂನ್, ಬಚ್ಚೇಗೌಡ, ಆರ್.ಹಿರಣ್ಯ, ಎಸ್.ಹರಿಪ್ರಿಯಾ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.