ADVERTISEMENT

ಆರೋಗ್ಯ ಸುಧಾರಣೆಗೆ ಯೋಗ ಅನುಸರಿಸಿ: ರಾಜಶೇಖರ್ ಯಾಗಂಟಿ

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 15:18 IST
Last Updated 26 ಜೂನ್ 2025, 15:18 IST
ಚಿಂತಾಮಣಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಹಮ್ಮಿಕೊಂಡಿದ್ದ ಪತಂಜಲಿ ಮುನಿ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕನ್ನಡಾಭಿಮಾನಿಗಳು
ಚಿಂತಾಮಣಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಹಮ್ಮಿಕೊಂಡಿದ್ದ ಪತಂಜಲಿ ಮುನಿ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕನ್ನಡಾಭಿಮಾನಿಗಳು   

ಚಿಂತಾಮಣಿ: ಯೋಗದ ಮಹತ್ವ ಪ್ರತಿಯೊಬ್ಬರು ಅರಿಯಬೇಕೆಂದು ‌ಪತಂಜಲಿ ಯೋಗ ಶಿಕ್ಷಣ ಸಮಿತಿ ಸಂಚಾಲಕ ರಾಜಶೇಖರ್ ಯಾಗಂಟಿ ತಿಳಿಸಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ನಗರದ ಶಂಕರ ಮಠ ಬಳಿ ವಿವೇಕ ಜಾಗೃತ ಬಳಗದ ಭಜನೆ ಮಂದಿರದಲ್ಲಿ ಏರ್ಪಡಿಸಿದ್ದ ಪತಂಜಲಿ ಮುನಿ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಮಂಜುನಾಥ್ ಮಾತನಾಡಿ, ಯೋಗ ಭಾರತೀಯ ಸಂಸ್ಕೃತಿಯಲ್ಲಿ ಬೇರೂರಿರುವ ಒಂದು ಪುರಾತನ ಅಭ್ಯಾಸವಾಗಿದೆ. ಇದು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ ಹೇಳಿದರು.

ADVERTISEMENT

ಹಿರಿಯ ಸಾಹಿತಿ ಕಾಗತಿ.ವಿ.ವೆಂಕಟರತ್ನಂ, ಯೋಗಾಭ್ಯಾಸದಲ್ಲಿ ತಮ್ಮ ವೈಯುಕ್ತಿಕ ಅನುಭವ ತಿಳಿಸುವುದರ ಮೂಲಕ ಪ್ರತಿಯೊಬ್ಬರು ಯೋಗಭ್ಯಾಸ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಸಾಪ ಅಧ್ಯಕ್ಷ ಎನ್.ವಿ ಶ್ರೀನಿವಾಸನ್, ಕೆ.ಎನ್‌.ರಮಣಾರೆಡ್ಡಿ, ಟಿ.ಸಿ.ಲಕ್ಷ್ಮಿಪತಿ, ಎನ್.ಬೇಟರಾಯಪ್ಪ, ಕೆ.ಎಂ.ವೆಂಕಟೇಶ್, ವಿ.ರಮೇಶ್ ಕೆ.ಬಾಲಾಜಿ, ಟಿ.ಎಂ ಈಶ್ವರ್ ಸಿಂಗ್, ಎಸ್.ಎಫ್.ಎಸ್ ಸುರೇಶ್, ಆರ್.ನಾಗರಾಜು, ಶಾಮಿಯಾನ ಕೋನಪ್ಪ ,ಶ್ರೀಹರಿ, ಶಿ.ಮ.ಮಂಜುನಾಥ್, ಎಸ್.ಸಿ ಶ್ರೀನಿವಾಸರೆಡ್ಡಿ, ಭಾಗೀರಥಿ, ಸರಸ್ವತಮ್ಮ, ಶ್ರೀನಿವಾಸ್, ಪಾರ್ವತಮ್ಮ, ಪದ್ಮಾವತಮ್ಮ ಮತ್ತಿತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.