ತರೀಕೆರೆ: ಪಟ್ಟಣದ ಸರ್ವಾಂಗಿಣ ಅಭಿವೃದ್ಧಿಗೆ ರಾಜ್ಯ ಸರ್ಕಾರ ಪ್ರಸ್ತುತ ಸಾಲಿನಲ್ಲಿ ಮುಕ್ತ ನಿಧಿಯಲ್ಲಿ ರೂ 2.74 ಕೋಟಿ ಹಣವನ್ನು ಬಿಡುಗಡೆ ಮಾಡಿದೆ ಎಂದು ಪುರಸಭಾಧ್ಯಕ್ಷೆ ಪಾರ್ವತಮ್ಮ ನಾಗರಾಜ್ ತಿಳಿಸಿದರು.
ಇಲ್ಲಿನ ಪುರಸಭಾ ಸಭಾಂಗಣದಲ್ಲಿ ಬುಧವಾರ ನಡೆದ ತುರ್ತು ಸಭೆಯಲ್ಲಿ ಈ ವಿಷಯ ತಿಳಿಸಿದ ಅವರು, ಈ ಹಿಂದಿನ ಸಾಲಿನಲ್ಲಿ ಕೈಗೊಂಡ ಎಸ್‌ಎಫ್‌ಸಿ ಮುಕ್ತನಿಧಿಯ ಮುಂದುವರಿದ ಕಾಮಗಾರಿಗಳಿಗೆ ಪ್ರಸ್ತುತ ಯೋಜನೆಯಿಂದ ರೂ 14.62 ಲಕ್ಷ ಹಣವನ್ನು ಮೀಸಲಿರಿಸಲಾಗಿದೆ ಎಂದು ತಿಳಿಸಿದರು.
ರೂ 55.80 ಲಕ್ಷ ಹಣವನ್ನು ಇತರೆ ಕಾಮ ಗಾರಿಗಳಿಗೆ, ರೂ 17.78 ಲಕ್ಷ ಹಣವನ್ನು ಬಡಜನರ ಕಲ್ಯಾಣಕ್ಕಾಗಿ, ರೂ 15 ಲಕ್ಷಹಣವನ್ನು ಪರಿಶಿಷ್ಟರ ಅಭಿವೃದ್ಧಿಗಾಗಿ, ರೂ 7.34 ಲಕ್ಷಹಣವನ್ನು ಕುಡಿಯುವ ನೀರಿನ ಯೋಜನೆಗೆ ಮೀಸಲಿರಿ ಸುವುದಾಗಿ ಅವರು ತಿಳಿಸಿದರು.
ಚಿಕ್ಕ ಪ್ರಮಾಣದ ಮಾರುಕಟ್ಟೆ, ಶೌಚಾಲಯ ನಿರ್ಮಾಣ, ಒಳ ಭಾಗದ ರಸ್ತೆ ಮತ್ತು ಚರಂಡಿ ಅಭಿವೃದ್ಧಿಗೆ ಮತ್ತು ಘನತ್ಯಾಜ್ಯ ವಸ್ತುಗಳ ನಿರ್ವಹಣೆ ಕುರಿತಂತೆ ಕ್ರಿಯಾ ಯೋಜನೆಯನ್ನು ಪುರಸಭೆ ತಯಾರಿಸಿದೆ ಎಂದ ಅವರು, ಈ ಎಲ್ಲಾ ಕಾಮಗಾರಿಗಳಿಗೆ ಸಭೆಯು ಒಮ್ಮತದ ಅನುಮೋದನೆ ನೀಡಿದೆ ಎಂದರು.
ಪುರಸಭೆಯ ಉಪಾಧ್ಯಕ್ಷೆ ಮಂಜುಳ ಪುರುಷೋತ್ತಮ್, ಸದಸ್ಯರಾದ ಹೇಮಲತಾ, ನರೇಂದ್ರ, ಪ್ರಕಾಶ್, ಜಿಯಾವುಲ್ಲಾ ಮತ್ತು ಮುಖ್ಯಾಧಿಕಾರಿ ಸತ್ಯನಾರಾಯಣ್ ಮುಂತಾದವರು ಸಭೆಯಲ್ಲಿ ಭಾಗವಹಿಸಿ ಪಟ್ಟಣದ ಅಭಿವೃದ್ಧಿಗೆ ಸಲಹೆಗಳನ್ನು ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.