ADVERTISEMENT

`ಮತದಾನ ಮಹತ್ವ ಜಾಗೃತಿಯಾಗಲಿ'

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2013, 9:03 IST
Last Updated 5 ಏಪ್ರಿಲ್ 2013, 9:03 IST

ತರೀಕೆರೆ: ಮತದಾರರಿಗೆ  ವ್ಯವಸ್ಥಿತ ಶಿಕ್ಷಣ  ಹಾಗೂ  ಮತದಾನದ ಕುರಿತು ಅರಿವು ಮೂಡಿಸುವ ಮೂಲಕ  ಹೆಚ್ಚಿನ ಮತದಾನವಾಗುಂತೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು  ಪ್ರಮುಖ ಪಾತ್ರ ವಹಿಸುವಂತೆ ಉಪ ವಿಭಾಗಾಧಿಕಾರಿ ಜಿ. ಅನುರಾಧಾ ಕರೆ ನೀಡಿದರು.

ಪಟ್ಟಣದ ಕನಕ ಕಲಾ ಭವನದಲ್ಲಿ ಚುನಾವಣಾ ಆಯೋಗ, ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ  ಆಶ್ರಯದಲ್ಲಿ  ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ  ಬುಧವಾರ ನಡೆದ  ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಮತ್ತು ಮತದಾನ ದಲ್ಲಿ ಪಾಲ್ಗೊಳ್ಳುವಿಕೆ ಯೋಜನೆ ಯ ಕಾರ್ಯಾಗಾರದಲ್ಲಿ ಮಾತನಾಡಿದರು.

ಮತದಾರರಿಗೆ  ಚುನಾವಣೆ  ಪ್ರಕ್ರಿಯೆ  ಹಾಗೂ ಮತದಾನದ ಬಗ್ಗೆ  ನೀಡುವ ಜಾಗೃತಿಯ ಅರಿವು  ಚುನಾವಣಾ ಪ್ರಚಾರ ಆಗದಂತೆ  ಎಚ್ಚರ ವಹಿಸಬೇಕು . ಎಂದು ಕಿವಿ ಮಾತು ಹೇಳಿದರು

ಚುನಾವಣೆ  ಪ್ರಕ್ರಿಯೆ ಕುರಿತಂತೆ  ಗುರುಮೂರ್ತಿ ಉಪನ್ಯಾಸ ನೀಡಿದರು. ಕಾರ್ಯಕರ್ತೆಯರಿಗೆ ಕಂಪ್ಯೂಟರ್ ಮೂಲಕ ಚುನಾವಣೆ ಪ್ರಕ್ರಿಯೆಯ ಪ್ರಾತ್ಯಕ್ಷತೆ  ಪ್ರದರ್ಶಿಸಲಾಯಿತು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ  ಚಂದ್ರಶೇಖರ್, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿ ದೇವರಾಜ್ , ತಾಲ್ಲೂಕು ವೈದ್ಯಾಧಿಕಾರಿ ಡಾ.ಗಣೇಶ, ಸಿಡಿಪಿಓ ಶ್ರಿಧರ್, ಭಾಗವಹಿಸಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT