ADVERTISEMENT

12 ಮಂದಿ ಚಲನ್‌ ಗೋಲ್‌ಮಾಲ್‌ ಪತ್ತೆ

ಬಿಲ್‌ಕಲೆಕ್ಟರ್‌ ಶ್ಯಾಮು ಅಮಾನತು: ಐವರ ವಿಚಾರಣೆ‌

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2021, 4:13 IST
Last Updated 23 ಮಾರ್ಚ್ 2021, 4:13 IST

ಚಿಕ್ಕಮಗಳೂರು: ಆಸ್ತಿಗೆ ತೆರಿಗೆ ಪಾವತಿ ಚಲನ್‌ಗಳಲ್ಲಿ ನಕಲಿ ಸೀಲು ಸಹಿ ಗೋಲ್‌ಮಾಲ್‌ ಪ್ರಕರಣದ ಆರೋಪಿ ನಗರಸಭೆ ಬಿಲ್‌ಕಲೆಕ್ಟರ್‌ ಶಾಮು ಅವರನ್ನು ಸೋಮವಾರ ಅಮಾನತು ಮಾಡಲಾಗಿದೆ.

‘ಕಟ್ಟಿದ್ದ ತೆರಿಗೆ ಹಣ ಬ್ಯಾಂಕ್‌ಗೆ ಪಾವತಿಯಾಗಿಲ್ಲ ಎಂದು 12 ಮಂದಿ ಸೋಮವಾರ ದೂರು ನೀಡಿದ್ದಾರೆ. ಹಣವನ್ನು ಕೊಡಿಸುವಂತೆ ಮನವಿ ಮಾಡಿದ್ದಾರೆ’ ಎಂದು ನಗರಸಭೆ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಶೀಲನೆ ಚುರುಕಗೊಂಡಿದೆ. ಈಗಾಗಲೇ ಹಲವು ಚಲನ್‌ಗಳು ಗೋಲ್‌ಮಾಲ್‌ ಆಗಿರುವುದು ಪತ್ತೆಯಾಗಿದೆ.

ADVERTISEMENT

ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಸಭೆ ನೌಕರ ಶ್ಯಾಮು, ಕೇಶವ, ಪರಮೇಶ, ದಿನೇಶ್‌, ವಾಸು ಎಂಬವರನ್ನು ಪೊಲೀಸರು ವಿಚಾರಣೆ ಮಾಡಿದ್ದಾರೆ. ಒಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.