ನರಸಿಂಹರಾಜಪುರ: ಅಮ್ಮ ಪೌಂಡೇಷನ್ ವತಿಯಿಂದ ಅವಶ್ಯಕತೆ ಇರುವ 55 ಜನರಿಗೆ ವೀಲ್‌ಚೇರ್ ವಿತರಣೆ ಮಾಡಲಾಗಿದೆ ಎಂದು ಪೌಂಡೇಷನ್ ಅಧ್ಯಕ್ಷ ಸುಧಾಕರ್ ಶೆಟ್ಟಿ ಹೇಳಿದರು.
ಕಡಹಿನಬೈಲು ಗ್ರಾ.ಪಂಯ ಮಾಕೋಡಿನಲ್ಲಿ ಗ್ಯಾಂಗ್ರೀನ್ ಸಮಸ್ಯೆಯಿಂದಾಗಿ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡ ರಾವೂರಿನ ಚಿನ್ನು ಎಂಬುವರಿಗೆ ವೀಲ್‌ಚೇರ್ ವಿತರಿಸಿ, ಅವರು ಮಾತನಾಡಿದರು.
ಪೌಂಡೇಷನ್‌ನ ಮಾಕೋಡು ಉಸ್ತುವಾರಿ ಶೈಲಾ ಜೇಮ್ಸ್ ತರಬೇತಿ ನೀಡಿದರು. ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ್, ಕಾರ್ಯಾಧ್ಯಕ್ಷ ಕೆ.ಎನ್.ಶಿವದಾಸ್, ಜೆಡಿಎಸ್ ಯುವ ಮುಖಂಡ ಸಂತೋಷ್, ಸೂಸಲವಾನಿ ಬೂತ್ ಅಧ್ಯಕ್ಷ ಪ್ರಶಾಂತ್, ಬಾಳೆಕೊಪ್ಪ ಬೂತ್ ಅಧ್ಯಕ್ಷ ಪ್ರದೀಪ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.