ADVERTISEMENT

ಕಡೂರು: ಲಕ್ಕಣ್ಣ ಎಪಿಎಂಸಿ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 13 ಜೂನ್ 2020, 9:56 IST
Last Updated 13 ಜೂನ್ 2020, 9:56 IST
ಕಡೂರು ಎಪಿಎಂಸಿ ಅಧ್ಯಕ್ಷರಾಗಿ ಆಯ್ಕೆಯಾದ ಲಕ್ಕಣ್ಣ ಅವರನ್ನು ಶಾಸಕ ಬೆಳ್ಳಿಪ್ರಕಾಶ್ ಮತ್ತಿತರರು ಅಭಿನಂದಿಸಿದರು.
ಕಡೂರು ಎಪಿಎಂಸಿ ಅಧ್ಯಕ್ಷರಾಗಿ ಆಯ್ಕೆಯಾದ ಲಕ್ಕಣ್ಣ ಅವರನ್ನು ಶಾಸಕ ಬೆಳ್ಳಿಪ್ರಕಾಶ್ ಮತ್ತಿತರರು ಅಭಿನಂದಿಸಿದರು.   

ಕಡೂರು: ಕಡೂರು ಎಪಿಎಂಸಿ ಅಧ್ಯಕ್ಷರಾಗಿ ಕೆ.ಎಚ್. ಲಕ್ಕಣ್ಣ ಅವಿರೋಧವಾಗಿ ಆಯ್ಕೆಯಾದರು. ಈ ಹಿಂದೆ ಅಧ್ಯಕ್ಷರಾಗಿದ್ದ ಮತಿಘಟ್ಟ ಶಿವಕುಮಾರ್ ರಾಜೀನಾಮೆಯಿಂದ ಈ ಸ್ಥಾನ ತೆರವಾಗಿತ್ತು. ಶುಕ್ರವಾರ ನಡೆದ ಚುನಾವಣೆಯಲ್ಲಿ ತಹಶೀಲ್ದಾರ್ ಉಮೇಶ್ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.

ನೂತನ ಅಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಶಾಸಕ ಬೆಳ್ಳಿಪ್ರಕಾಶ್, ‘ರೈತರು ಬೆಳೆದ ಕೊಬ್ವರಿ ಮುಂತಾದವುಗಳಿಗೆ ಬೆಂಬಲ ಬೆಲೆ ಕೋರಿ ಈಗಾಗಲೇ ತೆಂಗು ಹೆಚ್ಚು ಬೆಳೆಯುವ ಪ್ರದೇಶದ ಶಾಸಕರು ಈಗಾಗಲೇ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದೇವೆ. ಸರ್ಕಾರ ಆಯಾ ಕಾಲಘಟ್ಟದಲ್ಲಿ ರೈತರ ಬೆಳೆಗಳಿಗೆ ಬೆಲೆ ಕಡಿಮೆಯಾದಾಗ ಬೆಂಬಲ ಬೆಲೆ ನೀಡಿ ರೈತರ ನೆರವಿಗೆ ಧಾವಿಸಿದೆ. ಈಗಲೂ ಬೆಂಬಲ ಬೆಲೆ ವಿಚಾರದಲ್ಲಿ ರೈತರ ಪರವಾಗಿಯೇ ಇದೆ. ಹಾಗಾಗಿ, ರೈತರು ಹತಾಶರಾಗಬಾರದು. ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ. ಎಪಿಎಂಸಿ ಅಧ್ಯಕ್ಷರು ರೈತ ಸ್ನೇಹಿಯಾಗಿ ಸಮಿತಿಯನ್ನು ರೈತರ ಬಳಿಗೊಯ್ಯಬೇಕು’ ಎಂದು ಹಾರೈಸಿದರು.

ನೂತನ ಅಧ್ಯಕ್ಷ ಲಕ್ಕಣ್ಣ ಮಾತನಾಡಿ, ಎಲ್ಲ ನಿರ್ದೇಶಕರ ಸಲಹೆ ಸಹಕಾರದೊಂದಿಗೆ ಅಧ್ಯಕ್ಷ ಸ್ಥಾನವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆಂದು ತಿಳಿಸಿದರು.

ADVERTISEMENT

ಎಪಿಎಂಸಿ ಉಪಾಧ್ಯಕ್ಷ ಅಂಜನಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಆರ್.ಮಹೇಶ ಒಡೆಯರ್, ಪುರಸಭಾ ಸದಸ್ಯ ಭಂಢಾರಿ ಶ್ರೀನಿವಾಸ್, ಬಿಜೆಪಿ ಮಂಡಲಾಧ್ಯಕ್ಷ ಬಿ.ಪಿ.ದೇವಾನಂದ್, ಎ.ಮಣಿ, ಶಾಮಿಯಾನ ಚಂದ್ರು, ನಿರ್ದೇಶಕರಾದ ಬಿದರೆ ಜಗದೀಶ್, ಚೌಳಹಿರಿಯೂರು ರವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.