
ನರಸಿಂಹರಾಜಪುರ: 35 ವರ್ಷಗಳಿಂದ ಬಾಸಿಂಗವನ್ನು ಮಾಡುತ್ತಿರುವ ಕಲಾವಿದ ದಿವಾಕರ್ ದಂಪತಿಯನ್ನು ರೋಟರಿ ಸಂಸ್ಥೆಯಿಂದ ಸನ್ಮಾನಿಸಲಾಯಿತು.
ಅಭಿನವ ಪ್ರತಿಭಾ ವೇದಿಕೆಯ ಅಭಿನವ ಗಿರಿರಾಜ್ ಮಾತನಾಡಿ, ಕಲಾವಿದ ದಿವಾಕರ್ ವೃತ್ತಿಯಲ್ಲಿ ಪೈಂಟರ್ ಆಗಿದ್ದರೂ ಬೀದಿ ನಾಟಕ ಕಲಾವಿದನಾಗಿ, ಹಾಡುಗಾರನಾಗಿ ವಿವಿಧ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಮದುವೆಗೆ ಕಲಾತ್ಮಕವಾದ ಬಾಸಿಂಗ ಮಾಡುತ್ತಿದ್ದಾರೆ. ಅಂಥವರನ್ನು ಗುರುತಿಸಿ ರೋಟರಿ ಸಂಸ್ಥೆ ಸನ್ಮಾನಿಸುತ್ತಿರುವುದು ಶ್ಲಾಘನೀಯ ಎಂದರು.
ರೋಟರಿ ಸಂಸ್ಥೆಯ ಅಧ್ಯಕ್ಷ ಕಣಿವೆ ವಿನಯ್ ಮಾತನಾಡಿ, ಈ ವರ್ಷ ಸುಮಾರು 32 ವೃತ್ತಿಪರರನ್ನು ಗುರುತಿಸಿ ಸನ್ಮಾನಿಸಲಾಗುತ್ತಿದೆ ಎಂದರು.
ನಿರ್ದೇಶಕ ಸತೀಶ್ ಆಚಾರ್, ರೋಟರಿ ಸಂಸ್ಥೆ ಕಾರ್ಯದರ್ಶಿ ಲೋಕೇಶ್, ನಿಯೋಜಿತ ಅಧ್ಯಕ್ಷ ಪಿ.ಎಸ್.ವಿದ್ಯಾನಂದ ಕುಮಾರ್, ಕೆ.ಎಸ್.ರಾಜಕುಮಾರ್, ಸೋಮಶೇಖರ್, ಬಿ.ಟಿ.ವಿಜಯ ಕುಮಾರ್, ಮನೋಜ್ ಶೆಟ್ಟಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.