ಬಾಳೆಹೊನ್ನೂರು: ‘ಸಮಾಜದಲ್ಲಿ ನಡೆಯುವ ಭ್ರಷ್ಟಾಚಾರ, ಅಸಮಾನತೆ, ಅನ್ಯಾಯಗಳ ಕುರಿತು ಮಾಧ್ಯಮಗಳಲ್ಲಿ ನೈಜ ವರದಿ ಪ್ರಸಾರವಾದಲ್ಲಿ ಒಂದಷ್ಟು ಬದಲಾವಣೆ ನಿರೀಕ್ಷೆ ಮಾಡಬಹುದು’ ಎಂದು ಜನಪದ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಸತೀಶ್ ಅರಳಿಕೊಪ್ಪ ತಿಳಿಸಿದರು.
ಜೇಸಿ ಭವನದಲ್ಲಿ ಕ್ಲಾಸಿಕ್ ಜೇಸಿಐ ಸಂಸ್ಥೆ ಆಯೋಜಿಸಿದ್ದ ಪತ್ರಿಕಾ ದಿನ ಹಾಗೂ ಸೋಶಿಯಲ್ ಡೇ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಪತ್ರಕರ್ತರು ನಿಷ್ಪಕ್ಷಪಾತವಾಗಿ ವರದಿ ಮಾಡಬೇಕು. ಜನಸಾಮಾನ್ಯರ ಸಮಸ್ಯೆಗಳ ಅರಿವನ್ನು ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ಮನವರಿಕೆ ಮಾಡುವಲ್ಲಿ ದೃಶ್ಯ ಹಾಗೂ ಪತ್ರಿಕಾ ಮಾಧ್ಯಮಗಳ ಜವಾಬ್ದಾರಿ ಹೆಚ್ಚಿದೆ’ ಎಂದರು.
ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎಸ್.ಸಚಿನ್ ಕುಮಾರ್ ಮಾತನಾಡಿದರು. ಪತ್ರಕರ್ತರಾದ ಯಜ್ಞಪುರುಷ ಭಟ್, ನಾಗರಾಜ್ ಭಟ್, ಪ್ರವೀಣ್ ಓಂಕಾರ್, ಬಿ.ಎಸ್.ಸಚಿನ್ ಕುಮಾರ್, ಸತೀಶ್ ಜೈನ್ ಹಾಗೂ ಸೋಶಿಯಲ್ ಡೇ ಪ್ರಯುಕ್ತ ದೇವರಾಜ್ ಅವರನ್ನು ಗೌರವಿಸಲಾಯಿತು.
ಬಾಳೆಹೊನ್ನೂರು ಕ್ಲಾಸಿಕ್ ಜೇಸಿಐ ಅಧ್ಯಕ್ಷ ಇಬ್ರಾಹಿಂ ಶಾಫಿ, ಆಶೋಕ್, ಶಾಹೀದ್, ಕಾರ್ತಿಕ್, ಶಿಕ್ಷಕ ರಾಘವೇಂದ್ರ, ವೆಂಕಿ ಚೈತನ್ಯ, ಮಲ್ನಾಡ್ ಕಾಫಿ ವ್ಯವಸ್ಥಾಪಕ ಫಾಜಿಲ್ ಹುಸೇನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.