ADVERTISEMENT

ಹೋರಾಟಗಾರರ ವಿರುದ್ಧ ಎತ್ತಿಕಟ್ಟುವ ಕೆಲಸ: ಕಾಮ್ರೇಡ್ ಶೇಖರ್

ಸಿಪಿಐಎಂಎಲ್ 3ನೇ ತಾಲ್ಲೂಕು ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 9 ಜುಲೈ 2022, 6:25 IST
Last Updated 9 ಜುಲೈ 2022, 6:25 IST
ಬಾಳೆಹೊನ್ನೂರಿನ ವಿದ್ಯಾಗಣಪತಿ ಸಮುದಾಯಭವನದಲ್ಲಿ ಸಿಪಿಐ ಎಂ.ಎಲ್. ಆಯೋಜಿಸಿದ್ದ 3ನೇ ತಾಲ್ಲೂಕು ಸಮ್ಮೇಳನವನ್ನು ಕಾಮ್ರೇಡ್ ಶೇಖರ್ ಉಧ್ಘಾಟಿಸಿ ಮಾತನಾಡಿದರು.
ಬಾಳೆಹೊನ್ನೂರಿನ ವಿದ್ಯಾಗಣಪತಿ ಸಮುದಾಯಭವನದಲ್ಲಿ ಸಿಪಿಐ ಎಂ.ಎಲ್. ಆಯೋಜಿಸಿದ್ದ 3ನೇ ತಾಲ್ಲೂಕು ಸಮ್ಮೇಳನವನ್ನು ಕಾಮ್ರೇಡ್ ಶೇಖರ್ ಉಧ್ಘಾಟಿಸಿ ಮಾತನಾಡಿದರು.   

ಬಾಳೆಹೊನ್ನೂರು: ‘ಉಳುವವನೇ ಭೂಮಿಯ ಒಡೆಯ ಎಂಬ ನೀತಿಯು, ಈಗ ‘ಬಂಡವಾಳ ಹೂಡಿದವನೇ ಭೂಮಿಯ ಒಡೆಯ’ ಎಂಬಂತಾಗಿದೆ. ಧರ್ಮದ ಹೆಸರಿನಲ್ಲಿ, ದೇವರ ಹೆಸರಿನಲ್ಲಿ ಮುಗ್ದ ಯುವಕರನ್ನು ಸಾಮಾಜಿಕ ಹೋರಾಟಗಾರರ ವಿರುದ್ಧ ಎತ್ತಿ ಕಟ್ಟುವ ಕೆಲಸವನ್ನು ಆಳುವ ಸರ್ಕಾರಗಳು ನಡೆಸುತ್ತಿರುವುದು ವಿಷಾದನೀಯ’ ಎಂದು ಸಿಪಿಐಎಂ.ಎಲ್‌ನ ಶೇಖರ್ ಹೇಳಿದರು.

ಪಟ್ಟಣದ ವಿದ್ಯಾಗಣಪತಿ ಸಮುದಾಯಭವನದಲ್ಲಿ ಸಿಪಿಐ(ಎಂ.ಎಲ್.) ರೆಡ್ ಸ್ಟಾರ್ ಬಣ ಆಯೋಜಿಸಿದ್ದ ನರಸಿಂಹರಾಜಪುರ ತಾಲ್ಲೂಕಿನ 3ನೇ ತಾಲ್ಲೂಕು ಸಮ್ಮೇಳನವನ್ನು ತಮಟೆ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

‘ನೂತನ ಪ್ರಜಾಪ್ರಭುತ್ವ ನಿರ್ಮಾಣಕ್ಕಾಗಿ ಹೋರಾಡೋಣ, ಕಾರ್ಪೋರೇಟ್ ವ್ಯವಸ್ಥೆಯನ್ನು ಕಿತ್ತೋಗೆಯೋಣ, ಎಲ್ಲರೂ ಸೇರಿ ಹಸಿವು, ಬಡತನ ನಿರುದ್ಯೋಗ ಇಲ್ಲದ ಸಮಾಜ ನಿರ್ಮಿಸಲು ಮುಂದಾಗೋಣ’ ಎಂದರು.

ADVERTISEMENT

ನೂತನ ತಾಲ್ಲೂಕು ಸಮಿತಿ ರಚಿಸಿ 15 ಜನರನ್ನು ಸದಸ್ಯರನ್ನು ಆಯ್ಕೆ ಮಾಡಲಾಯಿತು.

ತಾಲ್ಲೂಕು ಕಾರ್ಯದರ್ಶಿ ಉಮೇಶ್, ಹರೀಶ್, ಪ್ರಸಾದ್, ಜೀವನ್, ರೆಡ್ ಸ್ಟಾರ್ ಜಿಲ್ಲಾ ಸಮಿತಿ ಸದಸ್ಯ ಬಿ.ಆರ್.ಸಂದೀಪ್, ಪುಟ್ಟಸ್ವಾಮಿ, ನಾಗೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.